ಚೀನಾದಲ್ಲೊಬ್ಬ ಹುಲಿ ಭಕ್ಷಕ ಉದ್ಯಮಿ...

ಶುಕ್ರವಾರ, 2 ಜನವರಿ 2015 (11:58 IST)
ಚೀನಾದಲ್ಲಿ ನಡೆದ ಈ ಘಟನೆ ಅಪರೂಪದಲ್ಲಿ ಅಪರೂಪದ್ದು. ವ್ಯಕ್ತಿಯೊಬ್ಬನ ಆರೋಪ ಸಾಬೀತಾಗಿ, ಆತನಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಷ್ಟಕ್ಕೂ ಆತ ಮಾಡಿದ ಅಪರಾಧವೇನು ಎನ್ನುತ್ತೀರಾ. ಆತನೊಬ್ಬ ಹುಲಿಭಕ್ಷಕ.ಕ್ರೂರ ಮಗ ಹುಲಿಯನ್ನು ಕೊಂದು ತಿನ್ನುವ ಚಟ ಬೆಳೆಸಿಕೊಂಡಿದ್ದ ಈ ಅಪರಾಧಿ. ಹುಲಿಯ ಸಾಗಣೆ ಮತ್ತು ಭಕ್ಷಣೆಯಲ್ಲಿ ಸಹಕರಿಸಿದ ಇತನ ಸ್ನೇಹಿತರು ಮತ್ತು ಇತರರು ಕೂಡ ಈಗ ಕಂಬಿಯ ಹಿಂದಿದ್ದಾರೆ. ಅವರಿಗೆಲ್ಲ ಆರು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. 
ವೃತ್ತಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಕ್ಸು ನಾನ್ನಿಂಗ್‌ ಪಟ್ಟಣದಲ್ಲಿರುವ ತನ್ನ ಹೋಟೆಲ್‌ನಲ್ಲಿ ಹುಲಿಮಾಂಸದ ಅಡುಗೆ ಮಾಡಿಸಿ 14 ಮಂದಿ ಗೆಳೆಯರ ಜತೆ ಜತೆಗೆ ಅದನ್ನು ತಿಂದಿದ್ದ ಎಂದು ತಿಳಿದು ಬಂದಿದೆ. ಮಾರ್ಚ್‌ 13, 2013ರಲ್ಲಿ ವಿದ್ಯುತ್‌ ಶಾಕ್‌ ನೀಡಿ ವ್ಯಾಘ್ರವೊಂದನ್ನು ಕೊಂದಿದ್ದ ಆತ ಅದರ ಮಾಂಸವನ್ನು ಬೇಯಿಸಿ ತಿಂದಿದ್ದ. ನಂತರ 2013ರ ಏಪ್ರಿಲ್‌ 21ರಂದು ಹಾಗೂ ಮೇ 20ರಂದು  ಮತ್ತೆರಡು ಹುಲಿಗಳನ್ನು ಕೊಂದು ತಿಂದಿದ್ದ. 
 
ಹುಲಿಯ ರಕ್ತ, ಮೂಳೆಗಳು. ಕೆಲವು ಅವಯವಗಳು, ಮಾಂಸ ಆತನ ಮನೆಯ ರೆಫ್ರಜರೇಟರ್‌ನಲ್ಲಿ ಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ. 
 
70,950 ಅಮೆರಿಕನ್ ಡಾಲರ್‌ ಹಣ ನೀಡಿ ಪ್ರತಿ ಹುಲಿಯನ್ನು ಖರೀದಿಸಿದ್ದಾಗಿ ವಿಚಾರಣೆ ವೇಳೆ ಈ ಹುಲಿ ಭಕ್ಷಕ ಹೇಳಿಕೊಂಡಿದ್ದಾನೆ ಹುಲಿಗಳನ್ನು  ಕಳ್ಳಸಾಗಣೆ ಮಾಡಿ ತರಿಸಿರಬೇಕು ಎಂದು ಊಹಿಸಲಾಗಿದೆ. 
 
ಹುಲಿ ಮೂಳೆಗಳು ಸಾಂಪ್ರದಾಯಿಕ ಚೀನೀ ಔಷಧದ ಒಂದು ಪ್ರಮುಖ ಘಟಕಾಂಶವಾಗಿದೆ. ಹುಲಿ ಮತ್ತು ಇತರ ಕೆಲವು ಪ್ರಾಣಿಗಳ ಶಿಶ್ನ, ಮೂಳೆಗಳು  ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಚೀನೀಯರಲ್ಲಿ ನಂಬಿಕೆ ಇದೆ ನಂಬುತ್ತಾರೆ. ಆದರೆ ಇದನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.

ವೆಬ್ದುನಿಯಾವನ್ನು ಓದಿ