ಪತ್ನಿಯ ಬ್ಯಾಗ್‌‌ನಲ್ಲಿ ಸಿಗರೇಟು ಪತ್ತೆ, ವಿಚ್ಚೇಧನ ನೀಡಿದ ಪತಿ

ಸೋಮವಾರ, 28 ಜುಲೈ 2014 (19:08 IST)
ಸೌದಿ ಅರಬ್‌‌ನ ರಿಹಾದ್ ನಗರದಲ್ಲಿ ವಾಸವಾಗಿ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಬ್ಯಾಗ್‌ನಲ್ಲಿ ಸಿಗರೇಟು ದೊರೆತಿದ್ದರಿಂದ, ಆಕ್ರೋಶಗೊಂಡು ಆಕೆಗೆ ವಿಚ್ಚೇದನ ನೀಡಿದ ಘಟನೆ ವರದಿಯಾಗಿದೆ.
 
ಮಹಿಳೆಯ ಪತಿ ಹೆಸರು ಬಹಿರಂಗ ಪಡಿಸಿಲ್ಲ. ಆಂಗ್ಲ ವೆಬ್‌‌‌ಸೈಟ್‌‌ ಪ್ರಕಾರ, ಪತ್ನಿ ಬ್ಯಾಗ್‌‌ನಲ್ಲಿ ಸಿಗರೇಟು ಇರುವುದನ್ನು ನೋಡಿದಾಗ ಕೆರಳಿ ಕೆಂಡಾಮಂಡಲವಾಗಿ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ, ಮಹಿಳೆ ಹೇಳುವುದೇ ಬೇರೆ, ಸಿಗರೇಟು ತನ್ನದಲ್ಲ ಎಂದಿದ್ದಾಳೆ ಮತ್ತು ತಾನು ಸಿಗರೇಟು ಸೇದುವುದಿಲ್ಲ ಎಂದು ಪತಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ವಿಫಲವಾಗಿದೆ. 
 
ಆದರೆ ಎರಡೂ ಮನೆಯವರು ಇವರ ಜಗಳ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ ಆದರೆ ಸಂಧಾನ ಸಫಲವಾಗಲಿಲ್ಲ.ಏಕೆಂದರೆ ಸಿಗರೇಟು ತನ್ನ ಪತ್ನಿಯದ್ದೇ ಆಗಿದೆ ಎಂದು ಪತಿ ನಂಬಿದ್ದ. ಯಾವುದೇ ಮಹಿಳೆ ತನ್ನ ಪತಿಯ ಸಿಗರೇಟು ಸೇವನೆಯಿಂದ ತೊಂದರೆಯಾದಲ್ಲಿ ಆಕೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಸೌದಿ ಅರಬ್‌‌‌‌‌‌ನ ನ್ಯಾಯಾಧೀಶ‌ರು ಹೇಳಿಕೆ ನೀಡಿದ್ದರು.
 
ಅಕ್ಟೋಬರ್‌ 2012ರಲ್ಲಿ ನ್ಯಾಯಾಧೀಶರು, ತಾಯಿ-ತಂದೆಯರಲ್ಲಿ ಒಬ್ಬರು ಸಿಗರೇಟು ಸೇದುತ್ತಿದ್ದಲ್ಲಿ ಅವರ ತಮ್ಮ ಮಕ್ಕಳನ್ನು ಸಂರಕ್ಷಣೆಯ ಹೊಣೆಯನ್ನು ಕಳೆದುಕೊಳ್ಳುತ್ತಾರೆ ಎಂದು ತೀರ್ಪು ನೀಡಿದ್ದರು.

ವೆಬ್ದುನಿಯಾವನ್ನು ಓದಿ