ವಿಶ್ವದ ದುಬಾರಿ ಹೆರಿಗೆ ರಾಷ್ಟ್ರ ಯಾವುದು...?

ಶುಕ್ರವಾರ, 28 ಅಕ್ಟೋಬರ್ 2016 (10:34 IST)
ವಾಷಿಂಗ್ಟನ್: ಮಕ್ಕಳನ್ನು ಹೆರಲು ವಿಶ್ವದಲ್ಲಿಯೇ ಅತೀ ದುಬಾರಿ ಸ್ಥಳ ಎಂದರೆ ಅಮೆರಿಕಾ ಎನ್ನುವ ಮಾಹಿತಿ ಮಾಧ್ಯಮವೊಂದು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಮುಂದುವರಿದ ಹದಿನಾಲ್ಕು ದೇಶಗಳನ್ನು ಅಧ್ಯಯನಕ್ಕೆ ಒಳಪಡಿಸಿ, ಅಲ್ಲಿಯ ವೈದ್ಯಕೀಯ ಮಾಹಿತಿಯನ್ನು ಸಂಪೂರ್ಣವಾಗಿ ಕಲೆ ಹಾಕಲಾಗಿತ್ತು. ಈ ಸಮೀಕ್ಷೆಯಲ್ಲಿ ಅತ್ಯಂತ ದುಬಾರಿ ರಾಷ್ಟ್ರವೆಂದು ಮೊದಲ ಸ್ಥಾನ ಅಮೆರಿಕಾ ಪಡೆದುಕೊಂಡರೆ, ಎರಡನೇ ಸ್ಥಾನ ಆಸ್ಟ್ರೇಲಿಯಾ ಪಡೆದುಕೊಂಡಿದೆ.
 
ಸಿಸೇರಿಯನ್ ಮೂಲಕ ಹೇರುವುದಕ್ಕೆ ಅಮೆರಿಕಾದಲ್ಲಿ 15500 ಡಾಲರ್ ವೆಚ್ಚ ತಗಲುತ್ತದೆಯಂತೆ.  ಸರಳ ಹೆರಿಗೆಗೆ ಆಸ್ಟ್ರೇಲಿಯಾದಲ್ಲಿ 6774 ಡಾಲರ್ ವೆಚ್ಚ ತಗುಲಿದರೆ, ಅಮೆರಿಕಾದಲ್ಲಿ ಇದಕ್ಕೆ ತಗಲುವ ವೆಚ್ಚ 10322 ಡಾಲರ್ ಗಳು. ಜಗತ್ತಿನಲ್ಲಿಯೇ ಅತಿ ಹೆಚ್ಚಿನ ವೇತನಗಳನ್ನು ಈ ಎರಡು ರಾಷ್ಟ್ರಗಳಲ್ಲಿ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಹೆರಿಗೆ ಸಮಯದಲ್ಲಿ ಮಕ್ಕಳು ಅಸುನೀಗುವುದನ್ನು ತಡೆಯಲು ಹೆಚ್ಚಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅದರಿಂದಾಗಿ ಹೆರಿಗೆಗೆ ತಗಲುವ ವೆಚ್ಚ ಕೂಡಾ ದುಬಾರಿಯಾಗಿದೆ ಎಂದು ವರದಿ ತಿಳಿಸುತ್ತದೆ.
 
ಈ ದುಬಾರಿ ದೇಶಗಳಲ್ಲಿಯ ಮಹಿಳೆಯರು ತಮ್ಮ ಗರ್ಭಧಾರಣೆಯಲ್ಲಿ ಹಾಗೂ ಹೆರಿಗೆ ಸಂದರ್ಭದಲ್ಲಿ ಯಾವುದೇ ಅಪಾಯ ಇಲ್ಲದಿದ್ದರೂ ಆಸ್ಪತ್ರೆಯಲ್ಲಿಯೇ ಹೆರಿಗೆಯಾಗಬೇಕೆಂದು ಇಚ್ಛೆ ಪಡುತ್ತಾರೆ. ಬೇಡಿಕೆ ಹೆಚ್ಚಿದ್ದ ಕಾರಣ ಸರಳ ಹೆರಿಗೆಯನ್ನು ಸಹ ಆಸ್ಪತ್ರೆಯಲ್ಲಿಯೇ ಮಾಡುವುದರಿಂದ ವೆಚ್ಚ ಹೆಚ್ಚಾಗಿದೆ. ಅತಿ ಅಪಾಯದ ಹೆರಿಗೆಯನ್ನು ನಿಭಾಯಿಸಲು ಹಲವು ಆಸ್ಪತ್ರೆಗಳು ಅಲ್ಲಿದ್ದು, ಕೆಲವೊಮ್ಮೆ ಅಗತ್ಯವಿಲ್ಲದೆ ಇದ್ದರೂ ಕಡಿಮೆ ಅಪಾಯದ ಹೆರಿಗೆಗಳಲ್ಲೂ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸುವುದು ಹೆಚ್ಚಾಗದೆ‌ ಇದು ಕೂಡಾ ವೆಚ್ಚ ವಿಪರೀತವಾಗಿ ಏರಕೆಯಾಗಲು ಕಾರಣ ಎಂದು ವರದಿ ಹೇಳುತ್ತದೆ.

ವೆಬ್ದುನಿಯಾವನ್ನು ಓದಿ