ಪಾಕ್: ಕುರಿ ಕದ್ದ ಬಾಲಕನ ಭುಜವನ್ನೇ ಕತ್ತರಿಸಿದ ಆರೋಪಿ

ಶನಿವಾರ, 26 ಜುಲೈ 2014 (19:05 IST)
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಒಬ್ಬ ಹುಡುಗ ಕುರಿ ಕದ್ದಿದ್ದಕ್ಕಾಗಿ ಜಮೀನುದಾರನೊಬ್ಬ ಹುಡುಗನ ಭುಜವನ್ನೇ ಕತ್ತರಿಸಿರುವ ದಾರುಣ ಘಟನೆ ವರದಿಯಾಗಿದೆ.  
 
ಪೋಲಿಸರು ಜಮೀನುದಾರನನ್ನು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯವೊಂದು ಜಮೀನುದಾರನನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ನೀರಿನ ಕಾರಣ ಮುಸ್ತಪ್ಪಾ ಗೌಸ್‌‌ ಜೊತೆಗೆ ಜಗಳ ನಡೆಯುತ್ತಿತ್ತು  ಎಂದು ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಿಂದ 200 ಕಿಲೋ ಮೀಟರ್‌ ದೂರದ ಗುಜರಾತ್‌ ಜಿಲ್ಲೆಯ ಚಕ್‌ ಬೋಲೂ ಗ್ರಾಮದ ನಾಸಿರ್‌ ಇಕಬಾಲ್‌‌ ಪೋಲಿಸರಿಗೆ ತಿಳಿಸಿದ್ದಾನೆ. 
 
ಜುಲೈ 21 ರಂದು ಆರೋಪಿ ಮುಸ್ತಪ್ಪಾ, ನಾಸಿರ್‌ನ ಮಗ ತಬಸ್ಸುಮ್‌‌ನನ್ನು ಅಪಹರಿಸಿ ಆತನ ಎರಡೂ ಭುಜಗಳನ್ನು ಕತ್ತರಿಸಿ ಹಾಕಿ ರಸ್ತೆಯಲ್ಲಿಯೇ ಎಸಗಿ ಪರಾರಿಯಾಗಿದ್ದಾನೆ. ದಾರಿಹೋಕನೊಬ್ಬ ತಬಸ್ಸುಮ್‌‌ನನ್ನು ಅಜಿಜ್‌ ಭಟ್ಟಿ ಶಹೀದ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ತಬಸ್ಸುಮ್ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. 
 
ಸ್ಥಳಿಯ ಮಾಧ್ಯಮವೊಂದರಲ್ಲಿ ಈ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಘಟನೆಯ ಕುರಿತಂತೆ ಸಂಪೂರ್ಣ ವಿವರ ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಶರಿಫ್‌ ಆದೇಶಿಸಿದ ನಂತರ ಆರೋಪಿ ಮುಸ್ತಪ್ಪಾನನ್ನು ಬಂಧಿಸಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಶರೀಫ್ ಆಸ್ಪತ್ರೆಗೆ ಹೋಗಿ ಬಾಲಕನ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಮುಖ್ಯಮಂತ್ರಿ ಶರೀಫ್ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ ಫೋಲಿಸ ಠಾಣೆಯ ಅಧಿಕಾರಿಯನ್ನು ಅಮಾನತ್ತುಗೊಳಿಸಿದ್ದಾರೆ. 
 
ತಬಸ್ಸುಮ್‌‌ನನ್ನು ಆಸ್ಪತ್ರೆಯವರು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದ ಕಾರಣ ಮೆಡಿಕಲ್‌ ಅದೀಕ್ಷಕರನ್ನು ಕೂಡ ಮುಖ್ಯಮಂತ್ರಿಗಳು ಅಮಾನತ್ತುಗೊಳಿಸಿದ್ದಾರೆ. ಈ ನಡುವೆ ಮುಸ್ತಪ್ಪಾ ತನ್ನ ಮನವಿ ಕೂಡ ಸಲ್ಲಿಸಿದ್ದಾನೆ. ಬಾಲಕ ಈತನ ಕುರಿಯನ್ನು ಕದ್ದಿದ್ದ. ಇದಕ್ಕಾಗಿ ಆತನ ಎರಡೂ ಭುಜಗಳನ್ನು ಕತ್ತರಿಸಿದ್ದೇನೆ ಎಂದು ಮುಸ್ತಪ್ಪಾ ಹೇಳಿದ್ದಾನೆ. ಮುಸ್ತಪ್ಪಾನ ವಿರುದ್ದ ಪಾಕಿಸ್ತಾನ ದಂಡ ಸಂಹಿತೆ 324 ಮತ್ತು 334ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. 

ವೆಬ್ದುನಿಯಾವನ್ನು ಓದಿ