ಸಲಿಂಗಿಗಳ ಪ್ರವಾಸೋದ್ಯಮಕ್ಕೆ ಸ್ವರ್ಗವಾದ ಕ್ಯೂಬಾ

ಶನಿವಾರ, 1 ಆಗಸ್ಟ್ 2015 (17:34 IST)
ಹವಾನಾ: ಕ್ಯೂಬಾದಲ್ಲಿ ಪ್ರವಾಸೋದ್ಯಮ ಗರಿಗೆದರುತ್ತಿದ್ದು, ದ್ವೀಪವು ಎಲ್‌ಜಿಬಿಟಿ(ಸಲಿಂಗಕಾಮಿಗಳು) ಸಮುದಾಯಕ್ಕೆ ತಾಣವಾಗಿ ಹೊರಹೊಮ್ಮುತ್ತಿದೆ. ಇಂತಹ ಗ್ರಾಹಕರಿಗೆ ಪ್ಯಾಕೇಜ್‌ ನೀಡುವುದರಲ್ಲಿ ವಿಶೇಷತೆ ಹೊಂದಿರುವ ಪ್ರವಾಸಿ ಏಜನ್ಸಿಯೊಂದು ಈಗಾಗಲೇ ಕಾರ್ಯಾಚರಣೆಯಲ್ಲಿದೆ. 
 
ಸಹಜೀವನದ ಸ್ಥಳವಾಗಿ ದ್ವೀಪವು ಅಧಿಕ ಸಾಮರ್ಥ್ಯದಿಂದ ಕೂಡಿದೆ ಎಂದು ಮೈ ಕಾಯಿಟೊ ಕ್ಯುಬಾದ ನಿರ್ದೇಶಕ ಅಲೈನ್ ಕ್ಯಾಸ್ಟಿಲೊ ತಿಳಿಸಿದರು.  ದೇಶದ ಸಲಿಂಗಿ ಸಮೂಹದ ಸುಧಾರಣೆಗೆ ಮತ್ತು ಗೋಚರತೆಗೆ ಕೊಡುಗೆ ನೀಡಲು ಅವರು ಬಯಸಿದ್ದಾರೆ. ನಾವು ಎಲ್ಲರಿಗೂ ಮುಕ್ತವಾಗಿದ್ದೇವೆ. ಗೌರವಕ್ಕೆ ಬೆಲೆಯಿರುವ ಮುಕ್ತ ಮತ್ತು ಸಹನೀಯ ಪರಿಸರವನ್ನು ನಾವು ಬಯಸಿದ್ದೇವೆ ಎಂದು ಹೇಳಿದರು. 
 
ಹವಾನದ ಪೂರ್ವಕ್ಕಿರುವ ಮೈ ಕಾಯಿಟೊ ಕ್ಯೂಬಾದಲ್ಲಿರುವ ಏಕಮಾತ್ರ ಸಲಿಂಗಿಗಳ ಬೀಚ್ ಆಗಿದ್ದು, ಆದ್ದರಿಂದಲೇ ಇದು ನಮ್ಮ ಕಂಪನಿಗೆ ಸೂಕ್ತ ಹೆಸರು ಎಂದು ಕ್ಯಾಸ್ಟಿಲೊ ಹೇಳಿದ್ದಾರೆ. ಕ್ಯೂಬಾಗೆ ಈ ವರ್ಷ 2 ದಶಲಕ್ಷಕ್ಕಿಂತ ಹೆಚ್ಚು ವಿದೇಶಿ ಪ್ರವಾಸಿಗಳು ಬಂದಿದ್ದಾರೆ. 
 
ಕ್ಯೂಬಾ ಸಲಿಂಗಿಗಳನ್ನು ಸದಾ ಸ್ವಾಗತಿಸುತ್ತದೆ. ಫೀಡಲ್ ಕ್ಯಾಸ್ಟ್ರೇ ನೇತೃತ್ವದ 1959ರ ಕ್ರಾಂತಿಯಲ್ಲಿ ಕ್ಯೂಬಾ ಸರ್ಕಾರ ಸಲಿಂಗ ಕಾಮಿಗಳಿಗೆ ಕಿರುಕುಳ ನೀಡಿ ಜೈಲಿಗೆ ತಳ್ಳುತ್ತಿದ್ದರು. 1990ರ ದಶಕದಲ್ಲಿ ಸಲಿಂಗ ಕಾಮವನ್ನು ಅಪರಾಧಮುಕ್ತಗೊಳಿಸಿ ದ್ವೀಪದ ಮುಕ್ತ ಆರೋಗ್ಯ ಸೇವೆಯು ಲಿಂಗ ಪುನರ್ರಚನೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾರಂಭಿಸಿತು. 
 

ವೆಬ್ದುನಿಯಾವನ್ನು ಓದಿ