ಮೊಟ್ಟ ಮೊದಲ ಬಾರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಗ್ಲೆ ಪತ್ತೆ

ಬುಧವಾರ, 11 ಮೇ 2016 (21:05 IST)
ಕಳೆದ 23 ವರ್ಷಗಳಿಂದ ಭಾರತ ಭೂಗತ ಲೋಕದ ಪಾತಕಿ, ಮುಂಬೈ ಬಾಂಬ್ ಸ್ಫೋಟದ ಸೂತ್ರಧಾರಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ತರಲು ನಾನಾ ಯತ್ನಗಳನ್ನು ಮಾಡಿದೆ. ದಾವೂದ್ ಕರಾಚಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದಾನೆಂದು ಪಾಕಿಸ್ತಾನಕ್ಕೆ ಅನೇಕ ದಾಖಲೆಗಳನ್ನು ಒದಗಿಸುವ ಮೂಲಕ ದೃಢಪಡಿಸಿದೆ. ಆದರೆ ಅದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಮಾತ್ರ ನೀರಸವಾಗಿದ್ದು, ಎಲ್ಲವನ್ನೂ ನಿರಾಕರಿಸುತ್ತಲೇ ಬಂದಿತ್ತು.

ಈಗ ಮೊಟ್ಟಮೊದಲ ಬಾರಿಗೆ ದಾವೂದ್ ಕುರಿತ ಪಾಕಿಸ್ತಾನದ ಸುಳ್ಳು ಬಟಾಬಯಲಾಗಿದೆ.  ಸುದ್ದಿಸಂಸ್ಥೆಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಡಾನ್ ಬಂಗ್ಲೆಯನ್ನು ಪತ್ತೆಹಚ್ಚಲು ಯಶಸ್ವಿಯಾಗಿದೆ. ದಾವೂದ್ ಬಂಗ್ಲೆಯ ವಿಳಾಸ ಡಿ 13, ಬ್ಲಾಕ್ 4, ಕ್ಲಿಫ್ಟನ್, ಕರಾಚಿ.  ಮೊಟ್ಟ ಮೊದಲ ಬಾರಿಗೆ   ಕುಟುಕು ಕಾರ್ಯಾಚರಣೆಯ ವಿಡಿಯೊದಲ್ಲಿ ದಾವೂದ್ ನಿವಾಸದ ಮೇಲಿನ ಕೋನಗಳ ಚಿತ್ರಗಳನ್ನು ತೋರಿಸಿದೆ. ಈ ನಿವಾಸವು ಒಂದು ಕಡೆ ಕ್ರಿಕೆಟ್ ಸ್ಟೇಡಿಯಂ ಮತ್ತು ಇನ್ನೊಂದು ಕಡೆಯಲ್ಲಿ ವಿವಾಹ ಮತ್ತು ಬಾಂಕ್ವೆಟ್ ಹಾಲ್ ಕ್ಲಿಫ್ಟನ್ ಮಾರ್ಕ್ವೀ ನೆಲೆಗೊಂಡಿದೆ.
 
 ಅರ್ಧ ಕಿಮೀ ದೂರದ ಐದು ನಿಮಿಷಗಳ ಬೈಕ್ ರೈಡ್‌ನಲ್ಲಿ ಸ್ಟಿಂಗ್ ಆಪರೇಟರ್‌ಗಳು ಸ್ಥಳೀಯರನ್ನು ಮತ್ತು ದಾವೂದ್ ಭದ್ರತಾ ಸಿಬ್ಬಂದಿಯನ್ನು ಕೂಡ ಭೇಟಿ ಮಾಡಿದರು. ಪ್ರತಿಯೊಬ್ಬರಿಗೂ ದಾವೂದ್ ಎಲ್ಲಿ ವಾಸಿಸುತ್ತಾನೆಂದು ನಿಖರವಾಗಿ ಗೊತ್ತಿದೆ. ಕರಾಚಿಯ ಐಷಾರಾಮಿ ಮಾರುಕಟ್ಟೆ ಸ್ಥಳದಲ್ಲಿ ಇದೊಂದು ತೆರೆದ ರಹಸ್ಯವಾಗಿತ್ತು. 

ವೆಬ್ದುನಿಯಾವನ್ನು ಓದಿ