ದಾವೂದ್ ಇಬ್ರಾಹಿಂ ಆಪ್ತ ದುಬೈನಲ್ಲಿ ಸಿಬಿಐ ಬಲೆಗೆ

ಗುರುವಾರ, 8 ಮಾರ್ಚ್ 2018 (10:01 IST)
ದುಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಫಾರುಖ್ ಟಾಕ್ಲಾನನ್ನು ದುಬೈನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಇದೀಗ ಆತನನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆ ದಾವೂದ್ ಸಹೋದರ ಕಸ್ಕರ್ ನನ್ನು ಬಂಧಿಸಲಾಗಿತ್ತು. ಕೆಲವು ದಿನಗಳ ಹಿಂದೆ ದಾವೂದ್ ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಲು ಬಯಸುತ್ತಿರುವುದಾಗಿ ಆತನ ನಿಕಟವರ್ತಿಗಳು ಹೇಳಿದ್ದರು ಎನ್ನಲಾಗಿತ್ತು.

ಇದೀಗ ಪಾತಕಿಯ ಪರಮಾಪ್ತನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗುತ್ತಿದೆ. ಈತನಿಂದ ಹಲವು ಸ್ಪೋಟಕ ಮಾಹಿತಿಗಳು ಹೊರ ಬೀಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ