ಉಗ್ರರು ಯಾವ ತರಹದಲ್ಲಿ ಮುಸಲ್ಮಾನರು: ಬಾಂಗ್ಲಾ ಪ್ರಧಾನಿ

ಶನಿವಾರ, 2 ಜುಲೈ 2016 (18:41 IST)
ಉಗ್ರರ ದಾಳಿ ಇದೊಂದು ಹೀನ ಕೃತ್ಯ. ಇವರೆಲ್ಲಾ ಎಂತಹ ಮುಸ್ಲಿಮರು? ಇವರಿಗೆ ಯಾವುದೇ ಧರ್ಮವಿಲ್ಲ. ಕೇವಲ ಭಯೋತ್ದಾನೆಯ ಧರ್ಮವಾಗಿದೆ ಎಂದು ಪ್ರಧಾನಿ ಶೇಕ್ ಹಸೀನಾ ಗುಡುಗಿದ್ದಾರೆ. 
 
ಉಗ್ರರು ನಡೆಸಿದ ದಾಳಿಯಲ್ಲಿ 13 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು, ಇತರ ಹತ್ಯೆಯಾದವರಲ್ಲಿ ಒಬ್ಬಳು ಭಾರತೀಯ ಯುವತಿ ಕೂಡಾ ಸೇರಿದ್ದಾಳೆ ಎಂದು ತಿಳಿಸಿದ್ದಾರೆ. 
 
ಉಗ್ರರ ವಿರುದ್ಧ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಕಮಂಡೋಗಳು ತಮ್ಮ ಜೀವವನ್ನು ಒತ್ತೆಯಿಟ್ಟು ಒತ್ತೆಯಾಳುಗಳನ್ನು ಕಾಪಾಡಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
 
ಜನರು ಇಂತಹ ಉಗ್ರರನ್ನು ಮಟ್ಟಹಾಕಬೇಕು. ದೇಶದಲ್ಲಿರುವ ಉಗ್ರರನ್ನು ಬೇರುಸಮೇತ ಕಿತ್ತುಹಾಕುವುದೇ ನನ್ನ ಸರಕಾರದ ಗುರಿಯಾಗಿದೆ ಎಂದು ಘೋಷಿಸಿದ್ದಾರೆ. 
 
ಆಧುನಿಕ ವಿಚಾರಧಾರೆಯನ್ನು ಹೊಂದಿರುವ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಉಗ್ರ ಚಟುವಟಿಕೆಯಲ್ಲಿ ಹೆಚ್ಚಳವಾಗಿದೆ. ಐಸಿಎಸ್ ಮತ್ತು ಇತರ ಸಂಘಟನೆಗಳ ಹೆಸರಲ್ಲಿ ದಾಳಿಗಳು ನಡೆಯುತ್ತಿವೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ