ಶಸ್ತ್ರಚಿಕಿತ್ಸೆ ನಂತರ ಗುಪ್ತಾಂಗವೇ ನಾಪತ್ತೆ: ಕೇಸ್ ದಾಖಲು

ಶನಿವಾರ, 26 ಜುಲೈ 2014 (19:42 IST)
ಇಲ್ಲಿನ ರಾಜ್ಯ ಕೋರ್ಟ್‌ನಲ್ಲಿ ಕೇಸೊಂದು ದಾಖಲಾಗಿದ್ದು,  ತಮ್ಮ ಶಸ್ತ್ರಚಿಕಿತ್ಸೆ ನಂತರ ಎಚ್ಚರವಾಗಿ ನೋಡಿದಾಗ ಗುಪ್ತಾಂಗವೇ ಕಾಣೆಯಾಗಿದೆ ಎಂದು ಜಾನಿ ಲೀ ಬ್ಯಾಂಕ್ಸ್ ಜೂನಿಯರ್ ದೂರು ನೀಡಿದ್ದಾರೆ.  ಜಾನಿ ಲೀ ಬ್ಯಾಂಕ್ಸ್ ಪ್ರಿನ್ಸ್‌ಟೌನ್ ವೈದ್ಯಕೀಯ ಕೇಂದ್ರಕ್ಕೆ ಕಳೆದ ತಿಂಗಳು ಹೋಗಿದ್ದರು.

ಅವರ ಹೋಗಿದ್ದು ಮಾಮೂಲಿ ಸುನ್ನತಿ ಚಿಕಿತ್ಸೆಗೆಂದು. ಆದರೆ ವೈದ್ಯರು ಗುಪ್ತಾಂಗಕ್ಕೆ ಸುನ್ನತಿ ಮಾಡುವ ಬದಲಿಗೆ ಗುಪ್ತಾಂಗವನ್ನೇ ಕುಯ್ದುಹಾಕಿ ಭಾರೀ ಪ್ರಮಾದವೆಸಗಿದ್ದಾರೆಂದು ಅವರು ದೂರಿದ್ದಾರೆ.
 
ಬ್ಯಾಂಕ್ಸ್ ಮತ್ತು ಅವರ ಪತ್ನಿ ಜೆಲ್ಡಾ ಬ್ಯಾಂಕ್ಸ್ ಈಗ ಭಾರೀ ಮೊತ್ತದ ದಂಡವನ್ನು ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ನಮ್ಮ ಪ್ರತಿವಾದಿಗಳು ವೈದ್ಯಕೀಯ ನಿರ್ಲಕ್ಷ್ಯ, ದುಷ್ಕೃತ್ಯವೆಸಗಿದ್ದಾರೆ. ಯೂರೋಲಾಜಿ ಕೇಂದ್ರದ ಅಲಾಬಾಮಾ ಮತ್ತು ಡಾ. ವಿನ್ಸೆಂಟ್ ಬಿವಿನ್ಸ್ ಮತ್ತು ಸೈಮನ್ ವಿಲಿಯಮ್ಸ್ ಕ್ಲಿನಿಕ್‌ನ ಡಾ. ಅಲನ್ ಸಿ. ಐಕಿನ್ಸ್ ಅವರನ್ನು ದೂರಿನಲ್ಲಿ ಹೆಸರಿಸಲಾಗಿದೆ.  

ಬ್ಯಾಂಕ್ಸ್ ಅವರಿಗೆ ತಮ್ಮ ಗುಪ್ತಾಂಗಕ್ಕೆ ಕತ್ತರಿ ಪ್ರಯೋಗ ಮಾಡಿದ್ದು ಏಕೆಂಬ ವಿವರಣೆಯನ್ನು ವೈದ್ಯರು ನೀಡಿರಲಿಲ್ಲ ಮತ್ತು ಏನಾಯಿತೆಂಬುದನ್ನೂ ಹೇಳಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ