ಈಜಿಪ್ಟ್ ಮಹಿಳೆಯರ ಅವಹೇಳನ: ಫೇಸ್‌ಬುಕ್ ಪುಟದ ನಿರ್ವಾಹಕನ ಬಂಧನಕ್ಕೆ ಆದೇಶ

ಗುರುವಾರ, 18 ಫೆಬ್ರವರಿ 2016 (17:39 IST)
ಜನಪ್ರಿಯ ಟೆಲಿವಿಷನ್ ಟಾಕ್ ಷೋನಲ್ಲಿ  ಈಜಿಪ್ಟ್ ಸಾಂಪ್ರದಾಯಿಕ ರಾಷ್ಟ್ರದ ವಿವಾಹಿತ ಮೂವರು ಮಹಿಳೆಯರ ಪೈಕಿ ಒಬ್ಬರು ನಂಬಿಕಸ್ಥರಲ್ಲ ಎಂದು ಟೆಲಿವಿಷನ್ ಟಾಕ್ ಷೋನಲ್ಲಿ ಪ್ರತಿಪಾದಿಸಿದ ಫೇಸ್ ಬುಕ್ ಪುಟದ ನಿರ್ವಾಹಕ ಬಂಧನದ ಭೀತಿ ಎದುರಿಸಿದ್ದಾರೆ. ಈಜಿಪ್ಟ್ ಮಹಿಳೆಯರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿ ಗೌರವಕ್ಕೆ ಚ್ಯುತಿವುಂಟು ಮಾಡಿದ್ದಾರೆಂದು ಆರೋಪಿಸಿ  ಟೈಮೋರ್ ಎಲ್ ಸೋಬ್ಕಿ ವಿರುದ್ಧ ಪಬ್ಲಿಕ್ ಪ್ರಾಸಿಕ್ಯೂಟರ್ ಮಂಗಳವಾರ ಬಂಧನದ ವಾರಂಟ್ ಹೊರಡಿಸಿದರು. 
 
 ಖಾಸಗಿ ಸ್ವಾಮ್ಯದ ಸಿಬಿಸಿ ಚಾನೆಲ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಅವರ ಪ್ರತಿಕ್ರಿಯೆಗಳನ್ನು ಪ್ರಸಾರ ಮಾಡಲಾಗಿತ್ತು. ಆದರೆ ಸಾಮಾಜಿಕ ಜಾಲ ತಾಣದಲ್ಲಿ ಈ ವಾರ ಪೋಸ್ಟ್ ಮಾಡುವವರೆಗೆ ಅದು ಅಷ್ಟೊಂದು ವಿವಾದ ಹುಟ್ಟುಹಾಕಿರಲಿಲ್ಲ. ಇದರ ಫಲವಾಗಿ ಪ್ರದರ್ಶನವನ್ನು 15 ದಿನಗಳ ಕಾಲ ಅಮಾನತುಗೊಳಿಸಲಾಯಿತು.  ಶೇ. 30ರಷ್ಟು ಈಜಿಪ್ಟ್ ಮಹಿಳೆಯರು ಅನೈತಿಕತೆಗೆ ಸಿದ್ಧವಾಗಿದ್ದಾರೆ. ಆದರೆ ಅವರನ್ನು ಪ್ರೋತ್ಸಾಹಿಸಲು ಯಾರೂ ಸಿಗುತ್ತಿಲ್ಲ ಎಂದು ಡೈರೀಸ್ ಆಫ್ ಸಫರಿಂಗ್ ಹಸ್ಬೆಂಡ್ ಎಂಬ ಫೇಸ್‌ಬುಕ್ ಪುಟದಲ್ಲಿ ಸೋಬ್ಕಿ ಬರೆದಿದ್ದರು. 
 
 ಇಂದಿನ ದಿನಗಳಲ್ಲಿ ಮಹಿಳೆಯರು ಪತಿಗೆ ವಂಚಿಸುವುದು ಸಾಮಾನ್ಯವಾಗಿದೆ. ಅನೇಕ ಮಹಿಳೆಯರು ತಮ್ಮ ಪತಿಯರು ವಿದೇಶದಲ್ಲಿದ್ದಾಗ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾರೆಂದು ಹೇಳಿ ವಿವಾದ ಹುಟ್ಟುಹಾಕಿದ್ದರು. 
 

ವೆಬ್ದುನಿಯಾವನ್ನು ಓದಿ