ಪಾಕ್: ಗುಂಡಿನ ಮೊರೆತಕ್ಕೆ ಬೆದರಿ ಕಟ್ಟಡದಿಂದ ಜಿಗಿದ ವಿದ್ಯಾರ್ಥಿನಿಯರು

ಬುಧವಾರ, 10 ಫೆಬ್ರವರಿ 2016 (16:39 IST)
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮಹಿಳಾ ಕಾಲೇಜೊಂದರ ಬಳಿ ಗುಂಡಿನ ಮೊರೆತ ಕೇಳಿ ಬಂದಿದ್ದರಿಂದ ಭಯಗೊಂಡ ಯುವತಿಯರು ಭಯಗ್ರಸ್ತರಾಗಿ ಕಟ್ಟಡದಿಂದ ಹಾರಿದ ಪರಿಣಾಮ ಕನಿಷ್ಠ 12 ಜನ ಯುವತಿಯರು ಗಾಯಗೊಂಡಿದ್ದಾರೆ. 

ರಾವಲ್ಪಿಂಡಿಯ ಸರ್ ಸೈಯ್ಯದ್ ಚೌಕ್ ಪ್ರದೇಶದಲ್ಲಿರುವ ವಕಾರ್-ಉನ್ನಿಸಾ ಸರ್ಕಾರಿ ಕಾಲೇಜಿನಲ್ಲಿ ಈ ದುರ್ಘಟನೆ ನಡೆದಿದೆ. 
 
ಕಾಲೇಜಿನ ಸಮೀಪದ ರಸ್ತೆಯಲ್ಲಿ ಪೊಲೀಸರು ಕಾರ್ ಕಳ್ಳರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದರೆ ಕಾಲೇಜು ವಿದ್ಯಾರ್ಥಿನಿಯರು ಇದನ್ನು ಉಗ್ರ ದಾಳಿ ಎಂದು ಭಾವಿಸಿ ಓಡಲು ಪ್ರಾರಂಭಿಸಿದರು. ಕೆಲವರು ಎರಡನೆಯ ಮಹಡಿಯಿಂದ ಹಾರಿದರೆ ಮತ್ತೆ ಕೆಲವರು ಕಾಲೇಜ್ ಕೌಂಪೌಂಡ್‌ನಿಂದ ಜಿಗಿದಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಅಧಿಕಾರಿ ಫಖಾರ್ ಸುಲ್ತಾನ್ ತಿಳಿಸಿದ್ದಾರೆ.
 
ಘಟನೆಯಲ್ಲಿ 12ಕ್ಕಿಂತ ಹೆಚ್ಚು ವಿದ್ಯಾರ್ತಿನಿಯರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
 
ಘಟನೆಯ ಬಳಿಕ ಕಾಲೇಜಿಗೆ ರಜೆ ಘೋಷಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ. 

ವೆಬ್ದುನಿಯಾವನ್ನು ಓದಿ