ಗನ್‌ಮ್ಯಾನ್‌ಗಳ ಮೇಲೆ ಗುಂಡಿನ ದಾಳಿ: ಹತ್ಯೆ

ಸೋಮವಾರ, 4 ಮೇ 2015 (09:43 IST)
ವಿಶ್ವದ ದೊಡ್ಡಣ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕಾದಲ್ಲಿ ದುಷ್ಕರ್ಮಿಯೋರ್ವ ಸಾರ್ವಜನಿಕವಾಗಿ ಇಬ್ಬರು ಗನ್‌ಮ್ಯಾನ್‌ಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಹತ್ಯೆಗೈದಿರುವ ಘಟನೆ ಇಲ್ಲಿನ ಟೆಕ್ಸಾಸ್‌ನಲ್ಲಿ ನಡೆದಿದೆ.  
 
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಗನ್‌ಮ್ಯಾನ್‌ಗಳೂ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಟೂನ್ ಸ್ಪರ್ಧೆ ಏರ್ಪಡಿಸಲಾಗಿದ್ದ ಸಂದರ್ಭದ್ಲಲಿ ನಡೆದಿದೆ ಎನ್ನಲಾಗಿದೆ. 
 
ಸಾರ್ವಜನಿಕವಾಗಿ ಗುಂಡು ಹಾರಿಸಿದ ದುಷ್ಕರ್ಮಿ ಕೂಡಲೇ ಪರಾರಿಯಾಗಿದ್ದು, ಪೊಲೀಸರು ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಎಫ್‌ಬಿಐ  ಅಧಿಕಾರಿಗಳು, ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ