ಪ್ಯಾಲೆಸ್ಟೈನ್‌ಗೆ ಭೇಟಿ ನೀಡಿದ ಭಾರತದ ಪ್ರಥಮ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಸೋಮವಾರ, 12 ಅಕ್ಟೋಬರ್ 2015 (20:04 IST)
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ಯಾಲೆಸ್ಟೈನ್‌ಗೆ ಒಂದು ದಿನದ ಭೇಟಿಗಾಗಿ ಸೋಮವಾರ ಆಗಮಿಸಿದ್ದು, ಪ್ಯಾಲೆಸ್ಟೈನ್‌ಗೆ ಭೇಟಿ ನೀಡಿದ ದೇಶದ ಪ್ರಥಮ ಮುಖ್ಯಸ್ಥರಾಗಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೇಸ್ಟೈನ್ ನಡುವೆ ಹೆಚ್ಚಿದ ಉದ್ವಿಗ್ನತೆಯಿಂದ ಅನೇಕ ಸಾವು, ನೋವುಗಳ ನಡುವೆ ಪ್ರಣಬ್ ಮುಖರ್ಜಿ ಭೇಟಿ ನೀಡಿದ್ದಾರೆ.

 ಮುಖರ್ಜಿ ಅಮ್ಮಾನ್‌ನಿಂದ ಇಸ್ರೇಲ್ ಟೆಲ್ ಅವೀವ್  ಬೆನ್ ಗುರಿಯನ್ ವಿಮಾನನಿಲ್ದಾಣಕ್ಕೆ ತೆರಳಿ ಅಲ್ಲಿಂದ ಪ್ಯಾಲೈಸ್ಟೈನ್ ಅಧಿಕಾರದ ಪ್ರದೇಶಕ್ಕೆ ತೆರಳಿದ್ದು ಅಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಮೂರು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಆಗಮಿಸಲಿದ್ದಾರೆ. 
 
ರಾಷ್ಟ್ರಪತಿ ಮತ್ತು ಅವರ ಬೆಂಗಾವಲು ಪಡೆ ಬೆನ್ ಗುರಿಯನ್ ವಿಮಾನನಿಲ್ದಾಣದಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಪ್ರದೇಶವನ್ನು ವಿಭಜಿಸುವ ಬಿಟುನಿಯಾ ಚೆಕ್‌ಪಾಯಿಂಟ್‌ಗೆ ಆಗಮಿಸಿದರು.  ಚೆಕ್‌ಪಾಯಿಂಟ್‌ನಲ್ಲಿ ರಾಷ್ಟ್ರಪತಿ ಮತ್ತು ಅವರ ನಿಯೋಗವು ಇಸ್ರೇಲ್ ವಾಹನಗಳಿಂದ ಪ್ಯಾಲೈಸ್ಟೈನ್ ಬದಿಯಲ್ಲಿ ವ್ಯವಸ್ಥೆ ಮಾಡಿದ ವಾಹನಗಳಿಗೆ ಬದಲಾಯಿಸಲಿದ್ದಾರೆ. ಚೆಕ್‌ಪಾಯಿಂಟ್‌ನಲ್ಲಿ ಪ್ಯಾಲೆಸ್ಟೈನ್ ಶಿಕ್ಷಣ ಸಚಿವ ಸಾಬ್ರಿ ಸೈಡಾನ್ ರಾಷ್ಟ್ರಪತಿಯನ್ನು ಬರಮಾಡಿಕೊಂಡರು. 

ವೆಬ್ದುನಿಯಾವನ್ನು ಓದಿ