ನಾಪತ್ತೆಯಾದ ಬೋಯಿಂಗ್ 777 ವಿಮಾನದ ರೆಕ್ಕೆಯ ಭಾಗ ಪತ್ತೆ ?

ಶುಕ್ರವಾರ, 31 ಜುಲೈ 2015 (20:35 IST)
ಹಿಂದು ಮಹಾಸಾಗರದಲ್ಲಿ ಪತ್ತೆಯಾದ ವಿಮಾನದ ಅವಶೇಷದ ಪಾರ್ಟ್ ನಂಬರ್‌ನಿಂದಾಗಿ ಇದು ಬೋಯಿಂಗ್ 777ಕ್ಕೆ ಸೇರಿದ್ದು ಎನ್ನುವುದು ದೃಢಪಟ್ಟಿದೆ ಎಂದು ಮಲೇಶಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದು,  ಫ್ಲೈಟ್ ಎಂಎಚ್ 370ರ ನಿಗೂಢತೆ ಬಯಲಾಗುವ ಸನಿಹ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಈ ಮಾಹಿತಿಯು ಮಲೇಶಿಯಾ ಏರ್‌ಲೈನ್ಸ್‌ನಿಂದ ಬಂದಿದ್ದು, ಅವರು ನನಗೆ ಮಾಹಿತಿ ನೀಡಿದ್ದಾರೆ ಎಂದು ಉಪ ಸಾರಿಗೆ ಸಚಿವ ಅಬ್ದುಲ್ ಅಜೀಜ್ ತಿಳಿಸಿದ್ದಾರೆ. 
ಲಾ ರೀಯುನಿಯನ್ ಫ್ರೆಂಚ್ ದ್ವೀಪದಲ್ಲಿ ಪತ್ತೆಯಾದ ರೆಕ್ಕೆಯ ಬಿಡಿಭಾಗವು  ಪಾರ್ಟ್ ಸಂಖ್ಯೆ '' 657 ಬಿಬಿ''ಯನ್ನು ಹೊಂದಿರುವುದು ಅವಶೇಷದ ಚಿತ್ರದಲ್ಲಿ ಪತ್ತೆಯಾಗಿದೆ. 
ಈ ಭಾಗವನ್ನು ಸಮಗ್ರವಾಗಿ ಗುರುತಿಸಿ ಎಂಚ್‌370ರ ನಿಗೂಢತೆಗೆ ಪರಿಹಾರ ಕಂಡುಹಿಡಿಯುವ ಆಶಾಭಾವನೆ ಹೆಚ್ಚಿದೆ.

239 ಪ್ರಯಾಣಿಕರಿದ್ದ ಎಂಚ್‌370 ವಿಮಾನವು 16 ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿತ್ತು. ಈಗ ಎರಡು ಮೀಟರುಗಳ ಉದ್ದದ ಅವಶೇಷದ ಚೂರನ್ನು ವಿಶ್ಲೇಷಣೆ ಸಲುವಾಗಿ ಫ್ರಾನ್ಸ್‌ಗೆ ಕಳಿಸಲಾಗುತ್ತಿದೆ.  ಈ ಭಾಗದ ಮೂಲದ ಬಗ್ಗೆ ದೃಢೀಕರಣವು ಬೋಯಿಂಗ್‌ನಿಂದ ಬರಬೇಕಾಗಿದ್ದು, ಫ್ಲಾಪರಾನ್ ಭಾಗ ಸುಲಭವಾಗಿ ಗುರುತಿಸುವಂತೆ ಅದಕ್ಕೆ ಬದಲಾವಣೆ ಮಾಡಲಾಗಿದೆ

ವೆಬ್ದುನಿಯಾವನ್ನು ಓದಿ