ಪ್ಯಾರಿಸ್ ಹತ್ಯಾಕಾಂಡ: ಪ್ರತೀಕಾರಕ್ಕೆ ನಿಂತ ಫ್ರಾನ್ಸ್

ಸೋಮವಾರ, 16 ನವೆಂಬರ್ 2015 (11:09 IST)
ಕಳೆದ ಶನಿವಾರ ರಾಜಧಾನಿ ಪ್ಯಾರಿಸ್‌ನಲ್ಲಿ ಮಾರಣ ಹೋಮ ನಡೆಸಿದ್ದ ಐಸಿಸ್ ವಿರುದ್ಧ ಫ್ರಾನ್ಸ್ ಪ್ರತೀಕಾರಕ್ಕೆ ನಿಂತಿದೆ. ಘಟನೆ ನಡೆದು ಎರಡು ದಿನಗಳಾಗುವಷ್ಟರಲ್ಲಿ ಫ್ರಾನ್ಸ್ ಐಸಿಸ್ ನೆಲೆಗಳ ಮೇಲೆ ದಾಳಿಯನ್ನು ಪ್ರಾರಂಭಿಸಿದೆ. 

ಐಸಿಸ್ ವಶದಲ್ಲಿರುವ ರಖ್ಬಾ ನಗರ, ಸಿರಿಯಾದಲ್ಲಿರುವ ಐಸಿಸ್ ನೆಲೆಗಳ ಮೇಲೂ 12 ಯುದ್ಧವಿಮಾನಗಳ ಮೂಲಕ ಬಾಂಬ್ ದಾಳಿಯನ್ನು ಕೈಗೊಳ್ಳಲಾಗಿದೆ. 
ಐಸಿಸ್‌ ಉಗ್ರರ ಪ್ರಮುಖ 20 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಫ್ರಾನ್ಸ್‌  ಗೃಹಸಚಿವಾಲಯ ಮಾಹಿತಿ ನೀಡಿದೆ.
 
ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಮುಂಬೈ ಮಾದರಿಯಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆಸಿದ ಐಸಿಸ್ ಉಗ್ರರು ರಕ್ತದೋಕುಳಿಯನ್ನು ನಡೆಸಿದ್ದರು. ದುರ್ಘಟನೆಯಲ್ಲಿ ಕನಿಷ್ಠ 158 ಜನ ಮೃತಪಟ್ಟು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜನದಟ್ಟಣೆ ಇರುವ ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಕನ್ಸರ್ಟ್‌ ಹಾಲ್‌ ಮತ್ತು ಕ್ರೀಡಾಂಗಣ ಸೇರಿದಂತೆ ಹಲವು ಕಡೆ  ವಿಧ್ವಂಸಕಾರಿ ಕೃತ್ಯವನ್ನು ಎಸಗಲಾಗಿತ್ತು.
 
ಈ ಅಮಾನವೀಯ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ ಐಸಿಸ್ ನೆಲೆಯಾದ ಸಿರಿಯಾದ ಮೇಲೆ ಫ್ರಾನ್ಸ್ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ದುಷ್ಕೃತ್ಯವನ್ನು ನಡೆಸಿದ್ದಾಗಿ ಹೇಳಿಕೊಂಡಿತ್ತು.
 
ಈ ವರ್ಷದ ಆರಂಭದಲ್ಲಿ ಕೂಡ ಪ್ಯಾರಿಸ್‍ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯ ಮೇಲೆ ಉಗ್ರರ ದಾಳಿ ನಡೆದಿತ್ತು. 

ವೆಬ್ದುನಿಯಾವನ್ನು ಓದಿ