ಆಕಾಶದಿಂದ ಕಾರ್ ಮೇಲೆ ಬಿತ್ತು 500 ಕೆಜಿ ತೂಕದ ಹಸು

ಸೋಮವಾರ, 5 ಅಕ್ಟೋಬರ್ 2015 (12:21 IST)
ಫ್ರಾನ್ಸ್‌ನ ಕುಟುಂಬವೊಂದು ವಿಲಕ್ಷಣ ಅಪಘಾತವನ್ನು ಎದುರಿಸಿತು. ಗುಡ್ಡವೊಂದರ ಸಮೀಪ ತಂದೆ- ಮಗ ಇಬ್ಬರು ಕಾರ್ ಮೇಲೆ ಹೋಗುತ್ತಿದ್ದ ಸಂರ್ಭದಲ್ಲಿ ದೊಡ್ಡ ಗಾತ್ರದ ಹಸುವೊಂದು ಆಕಾಶದಿಂದ ಕಾರ್ ಮೇಲೆ ಬಿದ್ದಿದೆ. ಇದೊಂದು ಕಟ್ಟುಕಥೆಯಲ್ಲ. ಪೆರ್ತಸ್ ಎಂಬಲ್ಲಿ ಈ ಘಟನೆ ನಡೆದಿದ್ದು ತಂದೆ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಆದರೆ ಆಕಾಶದಿಂದ ಬಿದ್ದಿದ್ದ ಹಸು ಮಾತ್ರ ಮೃತಪಟ್ಟಿದೆ.
 

ಅಷ್ಟಕ್ಕೂ ಆ ಹಸು ಆಕಾಶದಿಂದ ಬಿದ್ದಿದ್ದಾದರೂ ಹೇಗೆಂದರೆ, ಫ್ರಾನ್ಸ್- ಸ್ಪೇನ್‌ಗಳ ಗಡಿ ಪ್ರದೇಶದಲ್ಲಿರುವ ಪೆರ್ತಸ್ ಸಮೀಪ ಪೈರೆನೆಸ್ ಎಂಬ ಅತಿ ಎತ್ತರದ ಗುಡ್ಡ ಪ್ರದೇಶವಿದೆ. ಗುಡ್ಡದ ತುತ್ತ ತುದಿಯಲ್ಲಿ ಹುಲ್ಲು ಮೇಯಲು ಹೋಗಿದ್ದ ಹಸು ಜಾರಿ ಕೆಳಕ್ಕೆ ಬಿದ್ದಿದೆ. 
 
ಸುಮಾರು 500 ಕೆಜಿ ತೂಕದ ಹಸು ಬಿದ್ದ ಪರಿಣಾಮ ಕಾರಿನ ಬಾನೆಟ್ ಚೂರು ಚೂರಾಗಿ ಆಗಿ ಕಾರು ಪಲ್ಟಿಯಾಗಿದೆ. ಆದರೆ ಅದರಲ್ಲಿದ್ದ ತಂದೆ- ಮಗ ಪವಾಡಸದೃಶವಾಗಿ ಪಾರಾಗಿದ್ದಾರೆ. 
 
ಗಾಯದ ನೋವಿಗಿಂತ ಹೆಚ್ಚಾಗಿ ನಮಗಾದ ಭಯವೇ ಹೆಚ್ಚಾಗಿತ್ತು. ಅಲ್ಲದೇ ಆಕಳು ಮೃತಪಟ್ಟಿದ್ದು ಬಹಳ ನೋವನ್ನುಂಟು ಮಾಡಿತು ಎನ್ನುತ್ತಾರೆ ಅಪಾಯದಿಂದ ಪಾರಾದ ತಂದೆ- ಮಗ. 

ವೆಬ್ದುನಿಯಾವನ್ನು ಓದಿ