ವಯಸ್ಕರ ಹಲ್ಲು ಉತ್ಖನನ ಸಂದರ್ಭದಲ್ಲಿ ಪತ್ತೆಯಾಗಿದ್ದು ವಿವಿಧ ಡೇಟಿಂಗ್ ವಿಧಾನಗಳ ಮೂಲಕ ಇದು 550,000 ಮತ್ತು 580,000 ವರ್ಷಗಳಷ್ಟು ಪ್ರಾಚೀನವಾದದ್ದು ಎಂದು ಪುರಾತತ್ವ ಶಾಸ್ತ್ರಜ್ಞ ಅಮೇಲಿ ವಿಯಾಲೆಟ್ ಹೇಳಿದ್ದಾರೆ.
ಟುಟಾವೆಲ್ ಇತಿಹಾಸ ಪೂರ್ವ ಸ್ಥಳದಲ್ಲಿ ಈ ಹಲ್ಲು ಪತ್ತೆಯಾಗಿದ್ದು, ಈ ಸ್ಥಳದಲ್ಲಿ ಸುಮಾರು 50 ವರ್ಷಗಳಿಂದ ಉತ್ಖನನ ನಡೆಸಲಾಗುತ್ತಿದೆ. ಸುಮಾರು 450,000 ವರ್ಷಗಳಷ್ಟು ಹಿಂದೆ ವಾಸಿಸಿದ್ದ ಟುಟಾವೆಲ್ ಮಾನವನ ಅವಶೇಷ ಕೂಡ ಇದೇ ಸ್ಥಳದಲ್ಲಿ ಪತ್ತೆಯಾಗಿತ್ತು.