ಚತುರ್ವಳಿಗೆ ಜನ್ಮ ನೀಡಿದ 65ರ ಅಜ್ಜಿ

ಮಂಗಳವಾರ, 26 ಮೇ 2015 (12:17 IST)
65 ವರ್ಷದ ಅಜ್ಜಿಯೊಬ್ಬರು ಗರ್ಭ ಧರಿಸಿದ್ದಲ್ಲದೇ ಚತುರ್ವಳಿಗಳಿಗೆ ಜನ್ಮ ನೀಡಿ ದಂಗು ಬಡಿಸಿದ್ದಾಳೆ. ಬರ್ಲಿನ್‌ನಲ್ಲಿ ಈ ಕೌತುಕ ನಡೆದಿದೆ. ಅವಧಿಪೂರ್ವವೇ ಆಕೆಯ ಹೆರಿಗೆಯಾಗಿದ್ದು ( 26ವಾರ) ಶಿಶುಗಳು ಆರೋಗ್ಯವಾಗಿವೆ ಎಂದು ಜರ್ಮನ್‌ ಸುದ್ದಿವಾಹಿನಿಯೊಂದು ವರದಿ ಮಾಡಿದೆ. 

ನಾಲ್ಕು ಶಿಶುಗಳಲ್ಲಿ ಮೂವರು ಗಂಡಾಗಿದ್ದು, ಒಂದು ಹೆಣ್ಣಾಗಿದೆ. ತಾಯಿ ಅನ್ನಿಗ್ರೆಟ್ ರೌನಿಗ್  ಈಗಾಗಲೇ 13 ಮಕ್ಕಳ ತಾಯಿಯಾಗಿದ್ದು, ಆಕೆಗೆ 13 ಮೊಮ್ಮಕ್ಕಳಿದ್ದಾರೆ. ಈ ವಯಸ್ಸಿನಲ್ಲಿ ಆಕೆ ಗರ್ಭವತಿಯಾಗಿದ್ದು ಜರ್ಮನ್‌ನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
 
ಬರ್ಲಿನ್‌ನಲ್ಲಿ ಇಂಗ್ಲೀಷ್ ಮತ್ತು ರಷ್ಯನ್ ಭಾಷೆಯ ಶಿಕ್ಷಕಿಯಾಗಿರುವ ಅನ್ನಿಗ್ರೆಟ್ ಉಕ್ರೈನ್‌ನಲ್ಲಿ ಫಲವತ್ತತೆ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.  65ರ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳು ಸಾಕಷ್ಟಿದ್ದರೂ ಚತುರ್ವಳಿಗಳಿಗೆ ಜನ್ಮ ನೀಡಿದ್ದು ಇದೇ ಮೊದಲು. 
 
ಮೇ 19 ರಂದು ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರಕ್ಕೆ ತೆಗೆಯಲಾಗಿದ್ದು ಅವು 655ರಿಂದ 960 ಗ್ರಾಮ್ ತೂಕವನ್ನು ಹೊಂದಿವೆ. 

ವೆಬ್ದುನಿಯಾವನ್ನು ಓದಿ