ಆಸಿಯಾ ಆಂದ್ರಾಬಿ, ಬುರ್ಹಾನ್ ವನಿಯೊಂದಿಗೆ ಸಂಪರ್ಕವಿತ್ತು: ಹಫೀಜ್ ಸಯೀದ್

ಶುಕ್ರವಾರ, 22 ಜುಲೈ 2016 (19:19 IST)
ಫೈರ್‌ಬ್ರ್ಯಾಂಡ್‌ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಆಂದ್ರಾಬಿ ಮತ್ತು ಇತ್ತೀಚೆಗೆ ಸೇನಾಪಡೆಗಳ ಗುಂಡಿಗೆ ಬಲಿಯಾದ ಬುರ್ಹಾನ್ ವನಿಯವರೊಂದಿಗೆ ಸಂಪರ್ಕವಿತ್ತು ಎಂದು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಖಚಿತಪಡಿಸಿದ್ದಾರೆ.
 
2008 ರ ಮುಂಬೈ ದಾಳಿಯ ರೂವಾರಿಯಾದ ಸಯೀದ್, ಅಂದ್ರಾಬಿ ಸಹೋದರಿಯಂತಿದ್ದು, ದುಖ್ಕತರನ್-ಎ-ಮಿಲ್ಲತ್ ಮುಖ್ಯಸ್ಥೆಯಾಗಿದ್ದಾಳೆ ಎಂದು ಹೊಗಳಿದ್ದಾನೆ. 
 
ದುಖ್ಕತರನ್-ಎ-ಮಿಲ್ಲತ್ ಪ್ರತ್ಯೇಕತಾವಾದಿಗಳ ಸಂಘಟನೆಯಾಗಿದ್ದು ಆಸಿಯಾ ಆಂದ್ರಾಬಿ ಮುಖ್ಯಸ್ಥೆಯಾಗಿದ್ದಾಳೆ. ಪ್ರತಿ ವರ್ಷ ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಶ್ಮಿರದಲ್ಲಿ ಪಾಕ್ ಧ್ವಜವನ್ನು ಹಾರಿಸಿ ವಿವಾದ ಸೃಷ್ಟಿಸಿದ್ದಾಳೆ.   
 
ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಕರೆಸಿಕೊಂಡ ಸಯೀದ್, ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಭಾಷಣ ಮಾಡುತ್ತಾ ಬುರ್ಹಾನ್ ವನಿ ನನ್ನೊಂದಿಗೆ ಕೊನೆಯ ಬಾರಿ ಮಾತನಾಡುವುದಾಗಿ ಬಯಕೆ ತೋಡಿಕೊಂಡಿದ್ದ ಎಂದು ಹೇಳಿದ್ದಾನೆ.  
 
ತಮ್ಮೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನಂತರ ನನ್ನ ಬಯಕೆ ಈಡೇರಿದೆ. ನಾನು ಇದೀಗ ಹುತಾತ್ಮನಾಗಲು ಸಿದ್ದವಾಗಿದ್ದೇನೆ ಎಂದು ತಿಳಿಸಿದ್ದಾಗಿ ಹೇಳಿದ್ದಾನೆ.
 
ಜಮ್ಮು ಕಾಶ್ಮಿರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವನ್ನು ವಿರೋಧಿಸಿ ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೆ  ನಡೆದ ಕಾಶ್ಮಿರ್ ಕಾರವಾನ್ ರ್ಯಾಲಿಯಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ