ಹೌದು, ಕಾಶ್ಮಿರದಲ್ಲಿ ಹಿಂಸಾಚಾರಕ್ಕೆ ನಾನೇ ಕಾರಣ: ಹಫೀಜ್ ಸಯೀದ್

ಗುರುವಾರ, 28 ಜುಲೈ 2016 (15:19 IST)
ಸೇನಾಪಡೆಗಳಿಂದ ಹಿಜ್ಬುಲ್ ಉಗ್ರ ಬುರ್ಹಾನ್ ವನಿ ಎನ್‌ಕೌಂಟರ್ ನಂತರ ಜಮ್ಮು ಕಾಶ್ಮಿರದಲ್ಲಿ ನಡೆದ ಹಿಂಸಾಚಾರಕ್ಕೆ  ಲಷ್ಕರ್-ಎ-ತೊಯಿಬಾ ಕಾರಣವಾಗಿದೆ ಎಂದು ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನೀಡಿರುವ ಹೇಳಿಕೆ ಪಾಕಿಸ್ತಾನದ ಮುಖವಾಡ ಬಹಿರಂಗಗೊಳಿಸಿದೆ.
 
ಉಗ್ರ ಬುಹ್ರಾನ್ ವನಿ ಅಂತ್ಯಸಂಸ್ಕಾರದಲ್ಲಿ ಲಕ್ಷಾಂತರ ಕಾಶ್ಮಿರಿಗಳು ಪಾಲ್ಗೊಂಡಿದ್ದರು. ಬುಹ್ರಾನ್ ವನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿಸುತ್ತಿದ್ದವನನ್ನು ನೋಡಿದ್ದೀರಾ? ಅವನು ಯಾರು ಎಂದು ಗೊತ್ತಾ? ವನು ಲಷ್ಕರ್-ಎ-ತೊಯಿಬಾ ಸಂಘಟನೆಯ ಸದಸ್ಯ ಆಮೀರ್ ಎಂದು ಸಯೀದ್ ಹೇಳಿಕೆ ನೀಡಿದ್ದಾನೆ.
 
ಜಮ್ಮು ಕಾಶ್ಮಿರದಲ್ಲಿ ಹಿಂಸಾಚಾರಕ್ಕೆ ಭಾರತೀಯ ಸೇನಾಪಡೆಗಳು ಕಾರಣ ಎಂದು ತೋರಿಸಲು ಪಾಕ್ ಪ್ರಯತ್ನಿಸುತ್ತಿದ್ದರೆ, ಇದೀಗ ಸಯೀದ್ ನೀಡಿದ ಹೇಳಿಕೆ ಪಾಕ್‌ಗೆ ತಿರುಗುಬಾಣವಾಗಿದೆ.
 
ಕಾಶ್ಮಿರದಲ್ಲಿನ ಹಿಂಸಾಚಾರಕ್ಕೆ ಪಾಕಿಸ್ತಾನದಲ್ಲಿ ನೆಲೆಯೂರಿರುವ ಉಗ್ರ ಸಂಘಟನೆಗಳು ನೇರ ಕಾರಣವಾಗಿದೆ ಎನ್ನುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಹಲವಾರು ಜನರು ಕಾಶ್ಮಿರಕ್ಕೆ ತೆರಳಿ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರು. ಹಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ ಎಂದು ಶೋಕ ವ್ಯಕ್ತಪಡಿಸಿದರು.
 
ಕಾಶ್ಮಿರವಿಲ್ಲದೇ ಪಾಕಿಸ್ತಾನ ಅಪೂರ್ಣ ಎನ್ನುವ ಪಾಕ್ ಪ್ರಧಾನಿ ನವಾಜ್ ಷರೀಪ್ ಹೇಳಿಕೆಯನ್ನು ಪ್ರಸ್ತಾಪಿಸಿದ ಸಯೀದ್, ದೇವರ ದಯೆಯಿಂದ ಒಂದಿಲ್ಲೊಂದು ದಿನ ಕಾಶ್ಮಿರ ಪಾಕಿಸ್ತಾನದ ಭಾಗವಾಗುತ್ತದೆ ಎಂದು ಲಷ್ಕರ್-ಎ-ತೊಯಿಬಾ ಉಗ್ರ ಹಫೀಜ್ ಸಯೀದ್ ಹೇಳಿದ್ದಾನೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ