ಪಾಕ್ ಸೇನೆ ಪ್ರತಿಯೊಬ್ಬ ಭಾರತೀಯನಿಗೆ ಪಾಠ ಕಲಿಸಲಿದೆ: ಹಫೀಜ್ ಸಯೀದ್

ಶುಕ್ರವಾರ, 30 ಸೆಪ್ಟಂಬರ್ 2016 (18:12 IST)
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ದಾಳಿ ಮಾಡಿರುವುದನ್ನು ನಿಷ್ಪಕ್ಷಪಾತವಾಗಿ ಬಿತ್ತರಿಸಿದ ಜೀ ನ್ಯೂಸ್‍ಗೆ ಬೆದರಿಕೆಯೊಡ್ಡಿರುವ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್, ನಿಜವಾದ ಸೀಮಿತ ದಾಳಿ ಏನು ಎನ್ನುವುದನ್ನು ಪಾಕ್ ಸೇನಾಪಡೆ ತೋರಿಸಲಿದೆ ಎಂದು ಗುಡುಗಿದ್ದಾರೆ.
 

 ಝೀ ನ್ಯೂಸ್ ಬಿತ್ತರಿಸಿದ ಸೀಮಿತ ದಾಳಿ ವರದಿ ಕುರಿತಂತೆ ವ್ಯಗ್ರನಾಗಿರುವ ಸಯೀದ್, ನಿಜವಾದ ಸೀಮಿತ ದಾಳಿ ಏನು ಎನ್ನುವುದನ್ನು ಪಾಕ್ ಸೇನೆ ಪ್ರತಿಯೊಬ್ಬ ಭಾರತೀಯನಿಗೆ ಪಾಠ ಕಲಿಸಲಿದೆ ಎಂದು ಎಚ್ಚರಿಸಿದ್ದಾರೆ. 
 
ಜೀನ್ಯೂಸ್ ಉದ್ಯೋಗಿಗಳು ತಮ್ಮ ಸ್ಟುಡಿಯೋದಿಂದ ಸುಳ್ಳು ಫೋಟೋಗಳನ್ನು ಬಿತ್ತರಿಸುತ್ತಿದ್ದು, ಆದರೆ, ಸತ್ಯ ಸಂಗತಿ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ ಎಂದು ಗುಡುಗಿದ್ದಾರೆ. 
 
ಭಾರತೀಯ ಸೇನಾ ಪಡೆಗಳು ಎರಡು ದಿನಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಸೀಮಿತ ದಾಳಿ ನಡೆಸಿ 45 ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದ್ದರು. 
 
ಭಾರತೀಯ ಸೇನೆ ಪಡೆ ಹತ್ಯೆಗೈದ ಉಗ್ರರು ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಯಿಬಾ ಮತ್ತು ಹಿಜ್ಬುಲ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ