ಅರ್ಧ ಮೆದುಳಿನ ಮಗುವಿಗೆ ಒಂದು ವರ್ಷ: ತಂದೆ, ತಾಯಿಗೆ ಹೃದಯಹೀನರ ಟೀಕೆ

ಶುಕ್ರವಾರ, 9 ಅಕ್ಟೋಬರ್ 2015 (20:59 IST)
ಈ ಮಗು ಹುಟ್ಟಿದಾಗ ಅರ್ಧ ಮೆದುಳು ಮತ್ತು ತಲೆಬುರುಡೆಯೇ ಮಿಸ್ ಆಗಿತ್ತು. ವೈದ್ಯರು ಈ ಮಗು ಇನ್ನು ಬದುಕುವುದು ಕೆಲವೇ ದಿನಗಳು ಎಂದು ಭವಿಷ್ಯ ನುಡಿದಿದ್ದರು.  ಆದರೆ ಶುಭಸುದ್ದಿ ಏನೆಂದರೆ ಈ ಅದ್ಭುತ ಮಗುವಿಗೆ ಇತ್ತೀಚೆಗೆ ಒಂದು ವರ್ಷ ತುಂಬಿದ್ದು, ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಜಾಕ್ಸನ್‌ನ ಬದುಕುಳಿದ ಕಥೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಆದರೆ ಅವನ ಸ್ಫೂರ್ತಿ ನೀಡುವ ಕಥೆಯು ಕೆಲವು ಸಾಮಾಜಿಕ ಜಾಲ ತಾಣದ ಬಳಕೆದಾರರಿಗೆ ರುಚಿಸಲಿಲ್ಲ. ಜಾಕ್ಸನ್ ತಂದೆ, ತಾಯಿಗಳು ಇದಕ್ಕಾಗಿ ಪ್ರತಿರೋಧ ಎದುರಿಸಬೇಕಾಯಿತು. 
 
 ಜಾಕ್ಸನ್ ತಂದೆ, ತಾಯಿಗಳು ಸ್ವಾರ್ಥಿಗಳು, ಮಗುವನ್ನು ಅವರು ತ್ಯಜಿಸಬೇಕಿತ್ತು ಮುಂತಾದ ಆಘಾತಕಾರಿ ಸಲಹೆಗಳು ಕೇಳಿಬಂದವು. ಆದರೆ ಜಾಕ್ಸನ್ ತಂದೆ, ತಾಯಿಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅದಕ್ಕೆ ಭಾವನಾತ್ಮಕವಾಗಿ  ಉತ್ತರಿಸಿದರು.
 
ಜಾಕ್ಸನ್ ನಮ್ಮ ಮಗು, ನಮಗೆ  ಮಗುವನ್ನು ದಯಪಾಲಿಸಿದಾಗ ಅದರ ಜೀವನಕ್ಕೆ ಅವಕಾಶ ನೀಡುವುದು ನಮ್ಮ ಕೆಲಸ. ಜಾಕ್ಸನ್‌ ಬದುಕಲು ಅವಕಾಶ ನೀಡುವುದು ಹೇಗೆ ಸ್ವಾರ್ಥವಾಗುತ್ತದೆಂದು ನನಗೆ ಅರ್ಥವಾಗುವುದಿಲ್ಲ ಎಂದು ಪೋಸ್ಟ್ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ