ಆದರೆ ಪೈಲಟ್ ಒಬ್ಬ ತಾನು ಯಾವ ಕಡೆ ಹೊರಟಿದ್ದೇನೆ ಎಂದು ತಿಳಿಯದೆ..ರಾಷ್ಟ್ರೀಯ ಹೆದ್ದಾರಿ ಮೇಲೆ ಹೆಲಿಕಾಪ್ಟರನ್ನು ಇಳಿಸಿದ್ದಾನೆ. ಈ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಕಜಕಿಸ್ತಾನದ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಸಾಲಾಗಿ ಲಾರಿಗಳು ಪ್ರಯಣಿಸುತ್ತಿವೆ. ಸುತ್ತಲೂ ಮಂಜು ಸುರಿಯುತ್ತಿದೆ. ಹೆದ್ದಾರಿ ಬಿಟ್ಟು ಬೇರೇನು ಕಾಣುತ್ತಿಲ್ಲ. ಆ ಮಂಜಿನ ಸೆರಗಿನಿಂದ ಒಮ್ಮೆಲೆ ಕಜಕಿಸ್ತಾನ ಸೈನ್ಯದ ಎಂಐ 80 ಹೆಲಿಕಾಪ್ಟರ್ ಲಾರಿಗಳ ಮುಂದೆ..ನಡು ರಸ್ತೆಯಲ್ಲಿ ಲ್ಯಾಂಡ್ ಆಗಿದೆ.
ಈ ವಿಚಿತ್ರ ಘಟನೆಗೆ ಲಾರಿ ಡ್ರೈವರ್‌ಗಳು ಸುಸ್ತಾಗಿದ್ದರು. ಕಾರಿನಲ್ಲಿ ಹೋಗುವವರು ಅಡ್ರೆಸ್ ಕೇಳಿದಂತೆ ಅಷ್ಟು ದೊಡ್ಡ ಹೆಲಿಕಾಪ್ಟರನ್ನು ನಡುರಸ್ತೆಯಲ್ಲಿ ಇಳಿಸಿ ವಿಳಾಸ ಕೇಳುವುದೆಂದರೇನು? ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆ ದೇಶದ ರಕ್ಷಣಾ ಇಲಾಖೆ ಶಿಕ್ಷಣದ ಭಾಗವಾಗಿ ಪೈಲಟ್‌ಗಳಿಗೆ ಅವರ ನಿರ್ದೇಶಿತ ಪ್ರದೇಶ ತಿಳಿಸಿರಲಿಲ್ಲ. ಹೋದ ಸ್ಥಳವನ್ನು ತಿಳಿದುಕೊಳ್ಳಲು ಅವರನ್ನು ಕಳುಹಿಸಿದ್ದೆವೆಂದು ವಿವರಣೆ ನೀಡಿದೆ.