ಹಿಲರಿ ಕ್ಲಿಂಟನ್ ಬಿಲ್‌ ಕ್ಲಿಂಟನ್‌ಗೆ ಥಳಿಸುತ್ತಿದ್ದರು, ಪರಚುತ್ತಿದ್ದರು: ರೋಜರ್ ಸ್ಟೋನ್

ಬುಧವಾರ, 7 ಅಕ್ಟೋಬರ್ 2015 (21:39 IST)
ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್ ತುಂಬಾ ಮೃದುವಾದ ಸ್ವಭಾವ, ಹಾಸ್ಯಪ್ರವೃತ್ತಿ ಉಳ್ಳವರೆಂದು ಬಹಿರಂಗದಲ್ಲಿ ಕಾಣುತ್ತಾರೆ. ಆದರೆ 
ಅವರು ತೆರೆಮರೆಯಲ್ಲಿ ಅತೀ ಕೋಪತಾಪ ಪ್ರದರ್ಶಿಸುವ , ಸಿಬ್ಬಂದಿಯನ್ನು , ಸೀಕ್ರೆಟ್ ಸರ್ವೀಸ್ ಏಂಜರನ್ನು ಮತ್ತು ತಮ್ಮ ಪತಿ ಬಿಲ್ ಕ್ಲಿಂಟನ್‌ಗೆ ಬೆದರಿಕೆ ಹಾಕುವ ಪ್ರವೃತ್ತಿ ಹೊಂದಿದ್ದರು. '' ದಿ ಕ್ಲಿಂಟನ್ಸ್, ವಾರ್ ಆನ್ ವುಮೆನ್'' ಪುಸ್ತಕದಲ್ಲಿ ರಾಜಕೀಯ ತಂತ್ರಜ್ಞ ರೋಜರ್ ಸ್ಟೋನ್ ಹಿಲರಿ ಅವರ ಕೋಪಿಷ್ಠ ನಡವಳಿಕೆಯನ್ನು ಬಿಲ್ ಕ್ಲಿಂಟನ್ ಅರ್ಕಾನ್ಸಸ್ ಗವರ್ನರ್ ಆಗಿದ್ದ ಕಾಲದಿಂದ ವಿವರವಾಗಿ ಬರೆದಿದ್ದಾರೆ. 
 
 ಬಿಲ್ ಕ್ಲಿಂಟನ್ ಅವರ ವಿರುದ್ಧ ಹಿಲರಿ ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದರು. ಬಿಲ್ ಅವರಿಗೆ ಥಳಿಸುತ್ತಿದ್ದರಲ್ಲದೇ, ಗಟ್ಟಿಯಾದ ವಸ್ತುಗಳಿಂದ ಹೊಡೆಯುತ್ತಿದ್ದರು, ಮೈಯಲ್ಲಿ ರಕ್ತ ಬರುವಂತೆ ಪರಚುತ್ತಿದ್ದರು ಎಂದು ಸ್ಟೋನ್ ಬರೆದಿದ್ದಾರೆ.
 
 1993ರ ಮಾರ್ಚ್‌ನಲ್ಲಿ ಹಿಲರಿ ತಮ್ಮ ತಂದೆ ಲಿಟಲ್  ರಾಕ್‌ನಲ್ಲಿ ಹಾಸಿಗೆ ಹಿಡಿದಿದ್ದಾಗ ಅವರನ್ನು ನೋಡಲು ತೆರಳಿದ್ದರು. ಬಿಲ್ ಕ್ಲಿಂಟನ್ ಆಗ ಶ್ವೇತಭವನದಲ್ಲಿ ಬಾರ್ಬರಾ ಸ್ಟ್ರೈಸಾಂಡ್ ಜತೆ ಹಾಸಿಗೆ ಹಂಚಿಕೊಂಡಿದ್ದರು.

 ಬಿಲ್ ಕ್ಲಿಂಟನ್ ಅಭಿಮಾನಿಯಾಗಿದ್ದ ಗಾಯಕಿ ಬಾರ್ಬರಾ ಶ್ವೇತ ಭವನದಲ್ಲಿ ರಾತ್ರಿ ಕಳೆದ ವಿಚಾರ ತಿಳಿದ ಹಿಲರಿ ಉಗ್ರಾವತಾರ ತಾಳಿದ್ದರು. ಅದಾದ ಬಳಿಕ ಏನಾಯಿತೋ ಗೊತ್ತಿಲ್ಲ, ಅಧ್ಯಕ್ಷ ಬಿಲ್ ಕ್ಲಿಂಟನ್ ಕುತ್ತಿಗೆಯಲ್ಲಿ ಪರಚಿದ ಗಾಯವಾಗಿದ್ದು, ವರದಿಗಾರರು ಅದು ಹೇಗಾಯಿತೆಂದು ಕೇಳಿದ ಪ್ರಶ್ನೆಗೆ ಬಿಲ್ ಶೇವಿಂಗ್ ಮಾಡುವಾಗ ಬ್ಲೇಡ್ ತಾಗಿದ್ದೆಂದು ಹೇಳಿ ನುಣುಚಿಕೊಂಡಿದ್ದರು. 
 

ವೆಬ್ದುನಿಯಾವನ್ನು ಓದಿ