ಹಿಟ್ಲರ್ ಬಳಸುತ್ತಿದ್ದ ದೂರವಾಣಿ ಹರಾಜಾಗಿದ್ದು ಎಷ್ಟಕ್ಕೆ ಗೊತ್ತೇ?

ಮಂಗಳವಾರ, 21 ಫೆಬ್ರವರಿ 2017 (11:16 IST)
ವಾಷಿಂಗ್ಟನ್: ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬಳಸುತ್ತಿದ್ದ ಎನ್ನಲಾದ ದೂರವಾಣಿ, ಕೋಟಿ ಲೆಕ್ಕದಲ್ಲಿ ಹರಾಜಾಗಿದೆ.
ಮೆರಿಲ್ಯಾಂಡ್'ನ ಛೆಸಪೀಕ್ ನಗರದ ಅಲೆಗ್ಸಾಂಡರ್ ಸಂಸ್ಥೆ ಹಿಟ್ಲರ್ ಬಳಸುತ್ತಿದ್ದ ದೂರವಾಣಿಯನ್ನು ಭಾನುವಾರ ಹರಾಜಿಗೆ ಇಟ್ಟಿತ್ತು. ಅದನ್ನು ಹರಾಜಿನಲ್ಲಿ ಪಡೆದಾತ , 1.65 ಕೋಟಿ ರೂ.ಗಳಿಗೆ ಖರೀದಿಸಿದ್ದಾನೆ. ಆದರೆ, ಆತ ಯಾರು, ಹೆಸರೇನು ಎನ್ನುವುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.
 
1945 ರಲ್ಲಿ ಬರ್ಲಿನ್ ಬಂಕರ್'ನಲ್ಲಿ ಈ ದೂರವಾಣಿ ಪತ್ತೆಯಾಗಿತ್ತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕಠಿಣ ಆದೇಶ ರವಾನಿಸಲು ಹಿಟ್ಲರ್ ಇದನ್ನು ಬಳಸುತ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈ ದೂರವಾಣಿ ಕಪ್ಪು ಬಣ್ಣ ಹೊಂದಿತ್ತು. ನಂತರ ಅದಕ್ಕೆ ಕಡುಗೆಂಪು ಬಣ್ಣ ಬಳಿಯಲಾಗಿತ್ತು. ಆ ಬಣ್ಣ ಸಹ ಅಲ್ಲಲ್ಲಿ ಕಿತ್ತು ಹೋಗಿದೆ. ದೂರವಾಣಿ ಮೇಲೆ ಅಡಾಲ್ಫ್ ಹಿಟ್ಲರ್ ಹೆಸರು ಕೆತ್ತಲಾಗಿದ್ದು, ಸ್ವಸ್ತಿಕ್ ಚಿಹ್ನೆ ಸಹ ಇದೆ.

ವೆಬ್ದುನಿಯಾವನ್ನು ಓದಿ