37 ವರ್ಷದ ದೀರ್ಘಾಯುಷಿ ಪಾಂಡಾದ ಹುಟ್ಟುಹಬ್ಬ ಆಚರಣೆ

ಮಂಗಳವಾರ, 28 ಜುಲೈ 2015 (14:48 IST)
ಮಾನವರಿಗೆ 37 ವರ್ಷ ತುಂಬುವುದು ಅಂತಹ ಮಹತ್ವಪೂರ್ಣ ಹುಟ್ಟುಹಬ್ಬವಾಗದೇ ಇರಬಹುದು.ಆದರೆ ಹಾಂಕಾಂಗ್‌ನ ಜಿಯಾ ಜಿಯಾಗೆ 37 ವರ್ಷ ತುಂಬಿದ್ದು, ಸೆರೆಯಲ್ಲಿರುವ ಅತೀ ಹಿರಿಯ ವಯಸ್ಸಿನ ಹೆಣ್ಣು ದೈತ್ಯ ಪಾಂಡಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹುಟ್ಟುಹಬ್ಬವನ್ನು  ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದೆ.

ಮಾನವರಿಗೆ ಹೋಲಿಸಿದರೆ ಪಾಂಡಾಗೆ 37 ವರ್ಷ ತುಂಬಿದ್ದು 100ವರ್ಷಕ್ಕಿಂತ ಹೆಚ್ಚಾಗುತ್ತದೆ. ಹೀಗಾಗಿ ಜಿಯಾ ಜಿಯಾಗೆ ಬೃಹತ್ತಾದ ಹುಟ್ಟುಹಬ್ಬದ ಕೇಕ್ ಅನ್ನು ಐಸ್ ಮತ್ತು ಹಣ್ಣಿನ ರಸದಲ್ಲಿ ತಯಾರಿಸಿ ಅರ್ಪಿಸಲಾಯಿತು.  ನಗರದ ಓಷನ್ ಪಾರ್ಕ್ ತೀಮ್ ಪಾರ್ಕ್‌ನಲ್ಲಿ ಪಾಂಡಾದ ವಾಸಸ್ಥಾನದಲ್ಲಿ ಅದರ ವಯಸ್ಸನ್ನು ಸಂಕೇತಿಸುವ  37ನೇ ಸಂಖ್ಯೆಯನ್ನು ಕೆತ್ತಲಾಗಿತ್ತು. 
 
ಜಿಯಾ ಜಿಯಾ ಎರಡು ಗಿನ್ನಿಸ್ ವಿಶ್ವದಾಖಲೆಗಳನ್ನು ಮಾಡಿದೆ-ಸೆರೆಯಲ್ಲಿ ವಾಸಿಸುತ್ತಿರುವ ಅತೀ ಹಿರಿಯ ವಯಸ್ಸಿನ ಪಾಂಡಾ ಮತ್ತು ಹಿಂದೆಂದೂ ಸೆರೆಯಲ್ಲಿ ವಾಸವಿರದ  ಅತೀ ಹಿರಿಯ ವಯಸ್ಸಿನ  ಪಾಂಡಾ ಎಂದು ಗಿನ್ನಿಸ್ ವಿಶ್ವ ದಾಖಲೆ ತೀರ್ಪುಗಾರ ರಯಾನ್ ಫಿಟ್ಜ್‌ವಿಲಿಯಂ ಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು. 
ಪಾಂಡೆಗೆ ತಮ್ಮ ಅಭಿನಂದನೆಗಳನ್ನು ಸೂಚಿಸಿದ ಅವರು, ಇದೊಂದು ಅಚ್ಚರಿಯ ದೀರ್ಘಾಯುಷ್ಯದ ಸಾಧನೆ ಎಂದಿದ್ದಾರೆ. ಚೀನಾದ ಸಿಚುಯಾನ್‌ನಲ್ಲಿ ಜಿಯಾ ಜಿಯಾ 1978ರಲ್ಲಿ ಜನಿಸಿತು. 1999ರಲ್ಲಿ ಅದನ್ನು ಹಾಂಕಾಂಗ್‌‌ಗೆ ಅರ್ಪಿಸಲಾಯಿತು. 
 
ಹಿಂದಿನ ದಾಖಲೆಯನ್ನು ಗಂಡು ಪಾಂಡಾ ಡು ಡು ಹೊಂದಿದ್ದು, ಅದನ್ನು ಕೂಡ ಅರಣ್ಯದಲ್ಲಿ ಹಿಡಿಯಲಾಗಿದ್ದು ಚೀನಾದ ಹುಬೈ ಪ್ರಾಂತ್ಯದ ಪ್ರಾಣಿಸಂಗ್ರಹಾಲದಲ್ಲಿ 36ನೇ ವರ್ಷದಲ್ಲಿ ಸತ್ತಿತ್ತು. ಜಿಯಾ ಜಿಯಾ ಕಣ್ಣಿನ ಪೊರೆ ಮತ್ತು ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೂ ನಡೆಯುವಷ್ಟು ಶಕ್ತವಾಗಿದೆ. ಹೆಚ್ಚು ನಿದ್ದೆ ಮಾಡುತ್ತಿದೆ.
 
 
 

ವೆಬ್ದುನಿಯಾವನ್ನು ಓದಿ