9/11 ಉಗ್ರರ ದಾಳಿಗೆ ಒಸಮಾ ಬಿನ್ ಲಾಡೆನ್ ಪ್ರೇರಣೆ ಪಡೆದಿದ್ದು ಹೇಗೆ ಗೊತ್ತೇ?

ಬುಧವಾರ, 3 ಫೆಬ್ರವರಿ 2016 (21:16 IST)
ಈಜಿಪ್ತ್ ಏರ್‌ಲೈನ್ ಪೈಲಟ್‌ನೊಬ್ಬ ಉದ್ದೇಶಪೂರ್ವಕವಾಗಿ ವಿಮಾನವನ್ನು ಅಟ್ಲಾಂಟಿಕ್ ಸಮುದ್ರಕ್ಕೆ ನುಗ್ಗಿಸಿರುವುದೇ ಜಾಗತಿಕ ಭಯೋತ್ಪಾದನೆ ಸಂಘಟನೆ ಅಲ್‌ಕೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ 9/11 ಉಗ್ರ ದಾಳಿಗೆ ಪ್ರೇರಣೆಯಂತೆ.
   
ಸೆಪ್ಟೆಂಬರ್ 11 ದಾಳಿ ಎನ್ನುವ ಶಿರ್ಷಿಕೆ ಹೊಂದಿರುವ ಲೇಖನದಲ್ಲಿ ಅಲ್‌ಕೈದಾ, ಈಜಿಪ್ತ್ ಏರ್‌ಲೈನ್ಸ್‌ನ ಸಹ-ಪೈಲಟ್ ಗಾಮಿಲ್ ಅಲ್-ಬಟೌಟಿ ಲಾಸ್-ಏಂಜಲೀಸ್‌ನಿಂದ ಕೈರೋಗೆ ತೆರಳುತ್ತಿದ್ದ ವಿಮಾನವನ್ನು ಉದ್ದೇಶಪೂರ್ವಕವಾಗಿ ಅಟ್ಲಾಂಟಿಕ್ ಸಮುದ್ರಕ್ಕೆ ನುಗ್ಗಿಸಿ 100 ಅಮೆರಿಕನ್ ನಾಗರಿಕರು ಸೇರಿದಂತೆ 217 ಪ್ರಯಾಣಿಕರ ಸಾವಿಗೆ ಕಾರಣವಾದ ಘಟನೆ ಲಾಡೆನ್‌ಗೆ ಪ್ರೇರಣೆ ನೀಡಿತ್ತು ಎಂದು ಹೇಳಿದೆ.   
 
ಈಜಿಪ್ತ್ ವಿಮಾನ ದುರಂತದ ಸುದ್ದಿ ಕೇಳಿದ ಲಾಡೆನ್, ವಿಮಾನವನ್ನು ಸಮುದ್ರಕ್ಕೆ ನುಗ್ಗಿಸುವ ಬದಲು ಎತ್ತರದ ಕಟ್ಟಡಗಳಿಗೆ ಯಾಕೆ ಡಿಕ್ಕಿ ಹೊಡೆಯಲಿಲ್ಲ ಎನ್ನುವ ಆಲೋಚನೆ ಬಂದಿದ್ದೆ ತಂಡ ಕಾರ್ಯಾಚರಣೆಗೆ ಸಿದ್ದವಾಗಿದ್ದ ಎಂದು ಲೇಖನದಲ್ಲಿ ತಿಳಿಸಿದೆ.
 
ಈಜಿಪ್ತ್ ಏರ್‌ಲೈನ್ಸ್ ಅಡಳಿತ ಮಂಡಳಿ ಆತನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದರಿಂದ ಆಕ್ರೋಶಗೊಂಡ ಅಲ್-ಬಟೌಟಿ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿರಬಹುದು ಎನ್ನಲಾಗಿದೆ. 
 
ಆರಂಭದಲ್ಲಿ ಲಾಡೆನ್‌ ಇಂತಹ ವಿನಾಶಕಾರಿ ಕೃತ್ಯಕ್ಕೆ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಆದರೆ, ಸೆಪ್ಟೆಂಬರ್  ಉಗ್ರರ ದಾಳಿಯ ರೂವಾರಿ ಎಂದು ಕರೆಯಲಾದ ಖಾಲೀದ್ ಶೇಖ್ ಮೊಹಮ್ಮದ್ ಅವರನ್ನು ಲಾಡೆನ್ ಭೇಟಿಯಾದ ನಂತರ ದಾಳಿಗೆ ಸ್ಕೆಚ್ ಹಾಕಲಾಯಿತು ಎಂದು ಅಲ್‌ಕೈದಾ ವರದಿಯಲ್ಲಿ ಬಹಿರಂಗಪಡಿಸಿದೆ.

ವೆಬ್ದುನಿಯಾವನ್ನು ಓದಿ