ಐಸಿಸ್ ಉಗ್ರರಿಗೆ 2 ಲಕ್ಷ ರೂ. ಟೋಪಿ ಹಾಕಿದ ಮೂವರು ಮಹಿಳೆಯರು

ಶುಕ್ರವಾರ, 31 ಜುಲೈ 2015 (19:34 IST)
ಐಸಿಸ್ ಅಥವಾ ಇಸ್ಲಾಮಿಕ್ ಸ್ಟೇಟ್ ಅತ್ಯಂತ ಭಯಾನಕ ಭಯೋತ್ಪಾದಕ ಸಂಘಟನೆ ಎಂಬ ಹೆಸರು ಗಳಿಸಿದೆ. ಆದರೆ ಚೆಚನ್‌ನ ಮೂವರು ಮಹಿಳೆಯರು ತಾವು ಉಗ್ರರಿಗೆ ವಧುಗಳಾಗಿ ಬರುವುದಕ್ಕೆ ತಯಾರು ಎಂದು ಪೋಸ್ಟ್ ಮಾಡಿ ಸಾವಿರಾರು ಡಾಲರ್ (ಸುಮಾರು 2 ಲಕ್ಷ ರೂ. ) ಟೋಪಿ ಹಾಕಿದ್ದಾರೆ.

ಈಗ ಈ ಮಹಿಳೆಯರನ್ನು ರಷ್ಯಾದ ಅಧಿಕಾರಿಗಳು ಶಂಕಿತ ವಂಚನೆ ಆರೋಪದ ಮೇಲೆ ಬಂಧಿಸಿದ್ದಾರೆ. ಸಾಮಾಜಿಕ ಜಾಲ ತಾಣದ ಮೂಲಕ ಈ ವಂಚನೆ ಎಸಗಲಾಗಿದ್ದು, ಮಹಿಳೆಯರು ಐಸಿಸ್ ಉಗ್ರರನ್ನು ಸಂಪರ್ಕಿಸಿ ಅವರಿಗೆ ತಮ್ಮ ಚಿತ್ರಗಳನ್ನು ಕಳಿಸಿದ್ದರು. 
 
ಮಹಿಳೆಯರಲ್ಲಿ ಒಬ್ಬಳಾದ ಮರ್ಯಮ್ ಈ ಕುರಿತು ತಿಳಿಸುತ್ತಾ, ಅವನು ನನಗೆ ಆಮಿಷ ಒಡ್ಡಲು ಪ್ರಯತ್ನಿಸಿದ, ನೀನು ಸಿರಿಯಾಗೆ ಬರುತ್ತೀಯಾ, ಇಲ್ಲಿ ಚೆನ್ನಾಗಿರುತ್ತದೆ ಎಂದು ಹೇಳಿದ್ದ. ನಾನು ನನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಉಗ್ರಗಾಮಿ 10,000 ರೂಬಲ್ಸ್ ಕಳಿಸಿದ್ದ.(10, 768 ರೂ.) ಆದರೆ ಹಣ ಕಳಿಸಿದ ಮೇಲೆ ಸಾಮಾಜಿಕ ತಾಣದ ಖಾತೆಯನ್ನು  ಡಿಲೀಟ್ ಮಾಡಿದ್ದರು.

ಇದೇ ರೀತಿ ಹೊಸ ಅಕೌಂಟ್ ತೆರೆದು ಐಸಿಸ್ ಉಗ್ರರಿಗೆ ಚಿತ್ರಗಳನ್ನು ಪೋಸ್ಟ್ ಮಾಡಿ ಹಣ ಕೀಳುತ್ತಿದ್ದರು. ಹೀಗೆ  ಮಹಿಳೆಯರು 3100 ಡಾಲರ್( 1.9 ಲಕ್ಷ ರೂ. ) ಸಂಗ್ರಹಿಸಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. 
 

ವೆಬ್ದುನಿಯಾವನ್ನು ಓದಿ