ಮಂಗಳನಲ್ಲಿ ಮಾನವ : ಕಂಡಿದ್ದರಂತೆ ನಾಸಾದ ಮಾಜಿ ಉದ್ಯೋಗಿ!

ಶನಿವಾರ, 29 ನವೆಂಬರ್ 2014 (10:44 IST)
ನಾಸಾದ ಮಾಜಿ ಉದ್ಯೋಗಿಯೊಬ್ಬರು ಮಂಗಳಗ್ರಹದಲ್ಲಿ ತಾನು ಮನುಷ್ಯರನ್ನು ಕಂಡದ್ದಾಗಿ ಹೇಳುವುದರ ಮೂಲಕ ಭಾರಿ ಕುತೂಹಲವೊಂದನ್ನು ಹುಟ್ಟಿಹಾಕಿದ್ದಾರೆ.

ಅಮೆರಿಕದ ಕೋಸ್ಟ್  ಟು ಕೋಸ್ಟ್ ಎಎಂ ರೇಡಿಯೋ ಸ್ಟೇಶನ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ರೀತಿ ಹೇಳಿಕೊಂಡಿದ್ದಾರೆ.
 
1979ರಲ್ಲಿ ನಾನು ಇಬ್ಬರು ವ್ಯಕ್ತಿಗಳು ಮಂಗಳಗ್ರಹದಲ್ಲಿ ಸಂಚರಿಸುತ್ತಿದ್ದುದನ್ನು ನೋಡಿದೆ. ವೈಕಿಂಗ್ ಲ್ಯಾಂಡರ್ ಉಪಗ್ರಹದಲ್ಲಿ ಕುಳಿತು ಅಜ್ಞಾತ ವ್ಯಕ್ತಿಗಳು ಸ್ಪೇಸ್ ಸೂಟ್ ಧರಿಸಿ ಓಡಾಡುತ್ತಿದ್ದ ದೃಶ್ಯವನ್ನ ಬರಿಗಣ್ಣಿಂದ ವೀಕ್ಷಿಸಿದೆ. ಅವರು ನಮ್ಮ ಉಪಗ್ರಹದ ಸಮೀಪಕ್ಕೆ ಬರುತ್ತಿದ್ದಂತೆ ವಿಡಿಯೋ ರೆಕಾರ್ಡ್ ಸ್ಥಗಿತಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
 
29 ವರ್ಷಗಳಿಂದ ನನ್ನನ್ನು ಕಾಡುತ್ತಿರುವ ಈ ರಹಸ್ಯವನ್ನ ಯಾರಾದರೂ ಭೇದಿಸುತ್ತೀರಾ..? ಅಲ್ಲಿದ್ದ ಮನುಷ್ಯರು ಯಾರು..? ಬೇರೆ ಯಾವುದೋ ದೇಶ 1979ರಲ್ಲೇ ರಹಸ್ಯವಾಗಿ ಮನುಷ್ಯರನ್ನ ಮಂಗಳಗ್ರಹಕ್ಕೆ ಕಳುಹಿಸಿತ್ತಾ..? ಅಥವಾ ಅವರು ಬೇರೆ ಗ್ರಹದಿಂದ ಬಂದ ಮಾನವರಾ..? ಎಂಬ ಹತ್ತಾರು ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು ಕುಳಿತಿದ್ದಾರೆ ಜಾಕಿ.
 
ಜಾಕಿ ಅವರ ಪ್ರಕಾರ ಉಳಿದ 6 ನಾಸಾ ಉದ್ಯೋಗಿಗಳು ಸಹ ಈ ಘಟನೆಗೆ  ಸಾಕ್ಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ