ಒಂದಿಂಚು ಬಿಡದೇ ಸಂಪೂರ್ಣ ಕಾಶ್ಮೀರ ಮರಳಿ ಪಡೆಯುತ್ತೇನೆ: ಬಿಲಾವಲ್ ಭುಟ್ಟೋ

ಶನಿವಾರ, 20 ಸೆಪ್ಟಂಬರ್ 2014 (15:00 IST)
ಭಾರತದಿಂದ ಸಂಪೂರ್ಣ ಕಾಶ್ಮೀರವನ್ನು ನಾನು ಮರಳಿ ಪಡೆಯುತ್ತೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಮಗ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಗುಡುಗಿದ್ದಾರೆ. 

ನಿನ್ನೆ(ಶುಕ್ರವಾರ) ಪಂಜಾಬಿನ ಮುಲ್ತಾನ್ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ 20ರ ಹರೆಯದ ಬಿಲಾವಲ್ ಈ ಮಾತುಗಳನ್ನಾಡಿದ್ದಾರೆ. 
 
ನಾನು ಸಂಪೂರ್ಣ ಕಾಶ್ಮೀರವನ್ನು ಹಿಂಪಡೆಯುತ್ತೇನೆ.ಇತರ ಪ್ರಾಂತ್ಯಗಳಂತೆ ಇದು ಕೂಡ ಪಾಕಿಸ್ತಾನಕ್ಕೆ ಸೇರುತ್ತದೆ, ಎಂದು ಬಹಳ ಪ್ರಭಾವಿ ಭುಟ್ಟೊ ಕುಟುಂಬದ ಕುಡಿ ಘೋಷಿಸಿದ್ದಾನೆ. 
 
ಬಿಲಾವಲ್ ಈ ಹೇಳಿಕೆಗಳನ್ನು ನೀಡುವ ವೇಳೆ, ಮಾಜಿ ಪ್ರಧಾನಿಗಳಾದ ಯುಸೂಫ್ ರಾಜಾ ಗಿಲಾನಿ ಮತ್ತು  ರಾಜಾ ಪರವೇಜ್ ಅಶ್ರಫ್ ಅವರ ಜತೆ ಇದ್ದರು.
 
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥರಾದ ಬಿಲಾವಲ್ 2018 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 

 2007 ರಲ್ಲಿ ಹತ್ಯೆಗೀಡಾದ ಆತನ ತಾಯಿ, ಎರಡು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 1967 ರಲ್ಲಿ ಪಿಪಿಪಿ ಪಕ್ಷ ಸ್ಥಾಪಿಸಿದ್ದ  ಆತನ ಅಜ್ಜ ಝುಲ್ಫಿಕರ್ ಅಲಿ ಭುಟ್ಟೊ, 1970ರವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. 

ಆತನ ತಂದೆ ಆಸೀಫ್ ಅಲಿ ಜರ್ದಾರಿ 2008 ರಿಂದ 2013ರವರೆಗೆ ಪಾಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 

ವೆಬ್ದುನಿಯಾವನ್ನು ಓದಿ