ನಾನು ಸೆರೆಯಾದರೆ ನನ್ನ ಸೈನ್ಯ ವೈರಿಗಳಿಗೆ ಸಡಗರವನ್ನಾಚರಿಸಲು ಬಿಡದು: ಮಸೂದ್ ಅಜರ್

ಮಂಗಳವಾರ, 2 ಫೆಬ್ರವರಿ 2016 (17:12 IST)
ಒಂದು ವೇಳೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿದರೆ ಅದಕ್ಕೆ ಸೂಕ್ತ ಪ್ರತೀಕಾರವನ್ನು ತೀರಿಸಿಕೊಳ್ಳುವುದಾಗಿ ಜೈಶ್- ಇ- ಮೊಹಮ್ಮದ್ ಸ್ಥಾಪಕ ಮಸೂದ್ ಅಜರ್ ಬೆದರಿಕೆ ಒಡ್ಡಿದ್ದಾನೆ. 

"ಸಾವನ್ನು ಪ್ರೀತಿಸುವ ಸೈನ್ಯವನ್ನು ನಾನು ಸಿದ್ಧಪಡಿಸಿದ್ದೇನೆ. ಇವರನ್ನು ಉಡುಗಿಸುವ ಶಕ್ತಿ ನಮ್ಮ ಶತ್ರುಗಳಿಗಿಲ್ಲ. ದೇವರ ದಯೆಯಿಂದ ನಮ್ಮ ಶತ್ರುಗಳು ಸಂಭ್ರಮವನ್ನಾಚರಿಸಲು  ಇವರು ಬಿಡಲಾರರು. ನನ್ನ ಅನುಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳಲು  ಸಹ ಅವಕಾಶ ನೀಡಲಾರರು", ಎಂದು ಉಗ್ರ ಗುಡುಗಿದ್ದಾನೆ
 
ಪೇಷಾವರ ಮೂಲದ ಪತ್ರಿಕೆ ಅಲ್ ಕಲಮ್‌ನಲ್ಲಿ ಜನವರಿ 26 ರಂದು ಅಜರ್‌ನ ಈ ಮಾತುಗಳು ಪ್ರಕಟವಾಗಿವೆ. 
 
7 ಜನ ಸೈನಿಕರು ಹುತಾತ್ಮರಾಗಿ, 20 ಜನ ಸೈನಿಕರು ಗಾಯಗೊಳ್ಳಲು ಕಾರಣವಾದ ಪಠಾಣ್‌ಕೋಟ್ ಮೇಲಿನ ದಾಳಿಗೆ ಮಸೂದ್ ಅಜರ್ ಕಾರಣ  ಎಂದು ಭಾರತ ಆರೋಪಿಸಿದೆ.
 
1999ರಲ್ಲಿ ಕಂದಹಾರ್ ಇಂಡಿಯನ್ ಏರಲೈನ್ಸ್ ಅಪಹರಣವಾದಾಗ ಪ್ರಯಾಣಿಕರ ಬಿಡುಗಡೆಗೆ ಬಂಧಿತ ಮಸೂದ್ ಅಜರ್‌ನನ್ನು ವಿನಿಮಯ ಮಾಡಲಾಗಿತ್ತು. 
 
ಕಳೆದ ತಿಂಗಳು ಪಾಕ್ ಪ್ರಧಾನಿ ನವಾಜ್ ಶರೀಫ್ ಪಠಾಣ್‌ಕೋಟ್ ದಾಳಿಕೋರರ ಮೇಲೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು.
 

ವೆಬ್ದುನಿಯಾವನ್ನು ಓದಿ