ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆ ಉದಾಸೀನ: ನರೇಂದ್ರ ಮೋದಿ ತರಾಟೆ

ಗುರುವಾರ, 31 ಮಾರ್ಚ್ 2016 (14:18 IST)
ಬ್ರಸೆಲ್ಸ್ ನಲ್ಲಿ   ಕಳೆದ ವಾರ ನಡೆದ ಭಯೋತ್ಪಾದನೆ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾತ್ರಿ ಬ್ರಸೆಲ್ಸ್  ಭಯೋತ್ಪಾದನೆ ವಿಶ್ವಕ್ಕೆ ಎಸಗಿರುವ ಅಪಾಯಗಳ ಬಗ್ಗೆ ಗಮನಸೆಳೆದರು. ವಿಶ್ವಸಂಸ್ಥೆ ಇಂತಹ ಮುಖ್ಯ ಸವಾಲುಗಳನ್ನು ಎದುರಿಸಬೇಕು. ಇಲ್ಲದಿದ್ದರೆ ಜಾಗತಿಕ ಸಂಸ್ಥೆ ಅಪ್ರಸ್ತುತವೆನಿಸುತ್ತದೆ ಎಂದು ಟೀಕಿಸಿದರು.  

ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆ ಭಯೋತ್ಪಾದನೆ ವ್ಯಾಖ್ಯಾನಿಸಲು ಇನ್ನೂ ಅಸಮರ್ಥವಾಗಿದ್ದು, ಭಯೋತ್ಪಾದನೆಗಹೆ ಕುಮ್ಮಕ್ಕು ಅಥವಾ ಆಶ್ರಯ ನೀಡುವ ರಾಷ್ಟ್ರಗಳ ವಿರುದ್ಧ ಕ್ರಮಕೈಗೊಳ್ಳುವ ನಿರ್ಣಯದ ಕುರಿತು ಸ್ಪಂದಿಸಬೇಕು ಎಂದು ಮೋದಿ ಹೇಳಿದರು. ಭಯೋತ್ಪಾದನೆಯನ್ನು ಬರೀ ಬಂದೂಕುಗಳಿಂದ ಸೋಲಿಸಲು ಸಾಧ್ಯವಿಲ್ಲ. ಆದರೆ ಯುವಕರು ಮೂಲಭೂತವಾದದ ಕಡೆ ಸರಿಯದಂತೆ ಪರಿಸರವನ್ನು ಸಮಾಜದಲ್ಲಿ ನಿರ್ಮಿಸಬೇಕಾಗಿದೆ ಎಂದು ಮೋದಿ ವಿಶ್ಲೇಷಿಸಿದರು.

ಜಗತ್ತಿಗೆ ಭಯೋತ್ಪಾದನೆಯ ಬಿಸಿ ಈಗ ತಟ್ಟುತ್ತಿದೆ.ಆದರೆ ಭಾರತ ಕಳೆದ 40 ವರ್ಷಗಳಿಂದ ಈ ಕಿರುಕುಳವನ್ನು ಎದುರಿಸುತ್ತಿದೆ. ಅಮೆರಿಕ 9/11 ರ ದಾಳಿಯಿಂದ ತತ್ತರಿಸಿತು.ಆಗಿನಿಂದ ಭಾರತ ಯಾವ ರೀತಿಯ ಸಂಕಷ್ಟ ಎದುರಿಸುತ್ತಿದೆ ಎಂಬ ಅರಿವು ವಿಶ್ವ ಶಕ್ತಿಗಳಿಗೆ ಇರಲಿಲ್ಲ. ಆದರೆ ಭಾರತ ಭಯೋತ್ಪಾದನೆಗೆ ಎಂದೂ ತಲೆಬಾಗಿಲ್ಲ. ಅದಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಹೇಳಿದರು. 

ವೆಬ್ದುನಿಯಾವನ್ನು ಓದಿ