ಮೋದಿಯವರ ಸಮ್ಮುಖದಲ್ಲಿಯೇ ಅರುಣಾಚಲ್, ಕಾಶ್ಮಿ ರ ತಮ್ಮದೆನ್ನುವ ನಕ್ಷೆ ತೋರಿಸಿದ ಚೀನಾ

ಶುಕ್ರವಾರ, 15 ಮೇ 2015 (17:26 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚೀನಾ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ಚಾನೆಲ್ ಸಿಸಿಟಿವಿ ವಿವಾದಾತ್ಮಕ ನಕ್ಷೆ ತೋರಿಸಿ ಭಾರತದ ಸಾರ್ವಭೌಮತೆಯನ್ನು ತಮಾಷೆ ಮಾಡಿದೆ. ವಿವಾದಾಸ್ಪದ ನಕ್ಷೆಯ ಕುರಿತಂತೆ ಸಿಸಿಟಿವಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಸಿಸಿಟಿವಿ ಚಾನೆಲ್‌ನ್ನು ಚೀನಾ ಸರಕಾರ ಬಿತ್ತರಿಸುತ್ತಿದೆ. ಆದರೆ, ವಿವಾದಾಸ್ಪದ ನಕ್ಷೆ ಬಿತ್ತರಿಸಿರುವ ಬಗ್ಗೆ ಮತ್ತೊಂದು ಚಾನೆಲ್ ಎನ್‌ಬಿಟಿ ಪುಷ್ಠಿಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಚೀನಾದ ಸಿಸಿಟಿವಿ ಚಾನೆಲ್ ತೋರಿಸಿದ ಭಾರತದ ನಕ್ಷೆಯಲ್ಲಿ ಕಾಶ್ಮಿರ ಮತ್ತು ಅರುಣಾಚಲ ಪ್ರದೇಶಗಳು ಮಾಯವಾಗಿವೆ. ತಲೆ ಕತ್ತರಿಸಿದಂತೆ ಕಾಣುವ ಭಾರತದ ನಕ್ಷೆ ಮುಂಬರುವ ದಿನಗಳಲ್ಲಿ ಅಪಾಯದ ಸಂಕೇತವಾಗಿದೆಯೇ ಎನ್ನುವ ಆತಂಕ ದೇಶದ ಜನತೆ ಮತ್ತು ಸರಕಾರವನ್ನು ಕಾಡುತ್ತಿದೆ.

ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ವಿವಾದಾತ್ಪದ ನಕ್ಷೆಯ ಕುರಿತಂತೆ ಟ್ವೀಟ್ ಮಾಡಿ, ಚೀನಾ ತೋರಿಸಿದ ನಕ್ಷೆಯ ಬಗ್ಗೆ ಯಾಕೆ ದೇಶದ ನಾಯಕರು ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಇಂತಹ ನಕ್ಷೆ ನೋಡಿದ ಕೂಡಲೇ ಕೆಂಡಾಮಂಡಲರಾಗುವ ನಾಯಕರು ಮೌನವಾಗಿರುವುದು ಯಾಕೆ? ಚೀನಾದ ವಿರುದ್ಧ ಯಾಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರುಣಾಚಲ ಮತ್ತು ಕಾಶ್ಮಿರ ಹಾಗೂ ಲಡಾಖ್‌ನ ಕೆಲ ಭಾಗಗಳು ಚೀನಾ ತಮ್ಮ ದೇಶಕ್ಕೆ ಸೇರಿವೆ ಎಂದು ಹೇಳುತ್ತಾ ಬಂದಿದೆ. ಚೀನಾದ ನಿಲುವಿಗೆ ಭಾರತ ಸದಾ ವಿರೋಧ ವ್ಯಕ್ತಪಡಿಸುತ್ತಿದೆ.

ವೆಬ್ದುನಿಯಾವನ್ನು ಓದಿ