ಭಾರತ, ಪಾಕ್‌ಗೆ ಅಶುಭ ಸುದ್ದಿ: ಪಿಒಕೆಗೆ ಲಗ್ಗೆ ಹಾಕಲು ಇಸ್ಲಾಮಿಕ್ ಸ್ಟೇಟ್ ಸಂಚು

ಶುಕ್ರವಾರ, 3 ಜುಲೈ 2015 (16:17 IST)
ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಲಗ್ಗೆ ಹಾಕಲು ಪ್ರಯತ್ನಿಸುತ್ತಿರುವುದು ಪಾಕಿಸ್ತಾನ ಮತ್ತು ಭಾರತಕ್ಕೆ ಅಶುಭ ಲಕ್ಷಣಗಳಾಗಿವೆ ಎಂದು ಭಾರತೀಯ ಸೇನಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ.

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಐಎಸ್ ಇನ್ನೂ ದೊಡ್ಡ ಮಟ್ಟದಲ್ಲಿ ಆಕ್ರಮಣಕ್ಕೆ ಯೋಜಿಸಿಲ್ಲ. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಜ್ಜೆಗುರುತು ಮೂಡಿಸಲು ಖಂಡಿತವಾಗಿ ಯತ್ನಿಸಿದ್ದಾರೆ ಎಂದು ಲೆ.ಜ.ಕೆ.ಎಚ್.ಸಿಂಗ್ ರಜೌರಿ ಜಿಲ್ಲೆಯ ಜಾಂಗಾರ್ ಸೇನಾ ಸಮಾರಂಭದ ನೇಪಥ್ಯದಲ್ಲಿ ವರದಿಗಾರರಿಗೆ ತಿಳಿಸಿದರು. 
 
ಕಣಿವೆಯಲ್ಲಿ ಐಎಸ್ ಸಂಘಟನೆಯ ಉಪಸ್ಥಿತಿ ಬಗ್ಗೆ ಮಾಧ್ಯಮದ ವರದಿಗಳ ನಡುವೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಐಎಸ್ ಬೆದರಿಕೆ ಪರಿಕಲ್ಪನೆ ಕುರಿತು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು. ಸುಮಾರು 200ರಿಂದ 225 ಉಗ್ರಗಾಮಿಗಳು ಪಿರ್ ಪಾಂಚಾಲ್ ವಲಯದುದ್ದಕ್ಕೂ 36 ನೆಲೆಗಳಿಂದ ಭಾರತದ ಕಡೆ ನುಸುಳಲು ಕಾಯುತ್ತಿದ್ದಾರೆ ಎಂದು ಲೆ.ಜನ. ಸಿಂಗ್ ತಿಳಿಸಿದರು. 

ವೆಬ್ದುನಿಯಾವನ್ನು ಓದಿ