ಗೋಲಾಕಾರದ ರೊಟ್ಟಿ ಮಾಡದಿದ್ದುದಕ್ಕೆ ಮಗಳ ಕೊಲೆ

ಗುರುವಾರ, 1 ಅಕ್ಟೋಬರ್ 2015 (14:04 IST)
ಪಾಕಿಸ್ತಾನದಲ್ಲಿ ಒಂದು ವಿಲಕ್ಷಣ, ಆಘಾತಕಾರಿ ಘಟನೆ ನಡೆದಿದ್ದು, ಮಗಳು ಗೋಲಾಕಾರದ ರೊಟ್ಟಿ ಮಾಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಆಕೆಯನ್ನು ಕ್ರೂರವಾಗಿ ಕೊಲೆಗೈದಿದ್ದಾನೆ.

 
ಜೀಯೋ ಟಿವಿಯಲ್ಲಿ ಬಂದಿರುವ ಸುದ್ದಿಯ ಪ್ರಕಾರ ಆರೋಪಿ ಖಾಲಿದ್ ತನ್ನ ಮಗ ಅಬು ಜರ್ ಜತೆ ಸೇರಿ 13 ವರ್ಷದ ಅನಿಕಾಳನ್ನು ಕೊಂದಿದ್ದಾನೆ. ಆಜೀಮ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 
 
ಅನಿಕಾ ರೊಟ್ಟಿಯನ್ನು ರೌಂಡ್ ಆಗಿ ಮಾಡಲಿಲ್ಲವೆಂಬ ಕಾರಣಕ್ಕೆ ತಂದೆ- ಮಗ ಸೇರಿ ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಪ್ರಜ್ಞೆ ಕಳೆದುಕೊಂಡ ಬಾಲಕಿಯನ್ನು ಆಕೆಯ ಅಕ್ಕನ ಒತ್ತಾಯದ ಮೇರೆಗೆ ಆಸ್ಪತ್ರೆಗೆ ಸಾಗಿಸಲು ಒಪ್ಪಿಕೊಂಡಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಬಾಲಕಿ ದಾರಿ ಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾಳೆ, ಎಂದು ತಿಳಿದು ಬಂದಿದೆ.
 
ಅಷ್ಟಾದರೂ ಪಶ್ಚಾತಾಪ ಪಟ್ಟುಕೊಳ್ಳದ ಕ್ರೂರ ತಂದೆ ಮಗ ಬಾಲಕಿಯ ಶವವನ್ನು ಶವಾಗಾರದ ಮುಂದೆ ಎಸೆದಿದ್ದಾರೆ. ಅವರು ಶವವನ್ನು ಎಸೆಯುತ್ತಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  

ವೆಬ್ದುನಿಯಾವನ್ನು ಓದಿ