ಕಪ್ಪು ಹಣದ ಬಗ್ಗೆ ಭಾರತಕ್ಕೆ ಶೇ.1 ರಷ್ಟು ಗೊತ್ತಿಲ್ಲ, ನನಗೆ ತುಂಬಾ ಗೊತ್ತಿದೆ: ಫಾಲ್ಸಿಯಾನಿ

ಗುರುವಾರ, 20 ನವೆಂಬರ್ 2014 (14:10 IST)
ಕಳೆದ ಆರು ವರ್ಷಗಳ ಹಿಂದೆ ಜೀನೆವಾ ಎಚ್‌ಎಸ್‌ಬಿಸಿ ಖಾತೆಯಲ್ಲಿದ್ದ ಕಪ್ಪು ಹಣ ಹೊಂದಿದವರ ರಹಸ್ಯ ಪಟ್ಟಿಯನ್ನು ಬಹಿರಂಗಗೊಳಿಸಿ ಕೋಲಾಹಲಕ್ಕೆ ಹೆರ್ವೆ ಫಾಲ್ಸಿಯಾನಿ ಎನ್ನುವ ವ್ಯಕ್ತಿಯೊಬ್ಬ ಕಾರಣನಾಗಿದ್ದ. ಆ ವ್ಯಕ್ತಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸುಮಾರು 600 ಕ್ಕೂ ಹೆಚ್ಚು ಭಾರತೀಯರು ಕಪ್ಪು ಹಣ ಹೊಂದಿದವರ ಸಾಲಿನಲ್ಲಿದ್ದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಫಾಲ್ಸಿಯಾನಿ, ಭಾರತ ಸರಕಾರಕ್ಕೆ ಕಪ್ಪು ಹಣ ಹೊಂದಿದವರ ಬಗ್ಗೆ ಶೇ.1 ರಷ್ಟು ಮಾಹಿತಿ ತಿಳಿದಿಲ್ಲ. ಆದರೆ, ನನಗೆ ಕಪ್ಪು ಹಣ ಹೊಂದಿವರ ಸಂಪೂರ್ಣ ವಿವರಗಳು ಗೊತ್ತಿವೆ. ಭಾರತ ಸರಕಾರಕ್ಕೆ ನೆರವು ನೀಡಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
 
ಕಳೆದ 2011ರ ಅವಧಿಯಲ್ಲಿ ಫ್ರಾನ್ಸ್ ಸರಕಾರ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿದ ಕೆಲ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಿತ್ತು. ಅದು ಸಾಗರದಲ್ಲಿನ ಒಂದು ನೀರಿಗೆ ಸಮನಾದಂತೆ ಎಂದು ಫಾಲ್ಸಿಯಾನಿ ಲೇವಡಿ ಮಾಡಿದ್ದಾರೆ. 
 
ಭಾರತ ಸರಕಾರಕ್ಕೆ 2 ಎಮ್‌ಬಿ ದಾಖಲೆಗಳಲ್ಲಿ ಕೇವಲ 200 ಜಿಬಿ ದಾಖಲೆಗಳನ್ನು ನೀಡಲಾಗಿದೆ. ಭಾರತ ಸರಕಾರ ನನಗೆ ಕೋರಿದಲ್ಲಿ ನಾಳೆಯೇ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ.
 
ಜೀನೆವಾ ಮೂಲದ ಖಾಸಗಿ ಬ್ಯಾಂಕಾದ ಎಚ್‌ಎಸ್‌ಬಿಸಿಯಲ್ಲಿ ಫಾಲ್ಸಿಯಾನಿ ಸಿಸ್ಟಂ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬ್ಯಾಂಕ್‌ನಿಂದ ಹುದ್ದೆಯನ್ನು ತ್ಯಜಿಸಿ ಹೊರಬಂದ ಫಾಲ್ಸಿಯಾನಿ ತನ್ನ ಜೊತೆಗೆ 180 ಬಿಲಿಯನ್ ಯುರೋ ಮೌಲ್ಯದ 127000 ಖಾತೆಗಳ ವಿವರಗಳನ್ನು ತೆಗೆದುಕೊಂಡು ಹೋಗಿರುವುದು ಸ್ವಿಸ್ ಬ್ಯಾಂಕ್ ಇತಿಹಾಸದಲ್ಲಿಯೇ  ಹೊಸ ಕಾರ್ಮೋಡ ಕವಿದಂತಾಗಿತ್ತು.
 
42 ವರ್ಷ ವಯಸ್ಸಿನ ಫಾಲ್ಸಿಯಾನಿ ಆರಂಭದಲ್ಲಿ ಬ್ಯಾಂಕ್ ಅಧಿಕಾರಿಗಳ ದೂರಿನಿಂದಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆಲ ಕಾಲ ದೂರವಿರಬೇಕಾಯಿತು. ನಂತರ ಪೊಲೀಸ್ ಅಧಿಕಾರಿಗಳು ಆತನನ್ನು ಜೈಲಿಗೆ ತಳ್ಳಿದರು. ಇದೀಗ ಕಪ್ಪು ಹಣ, ಹಣ ದುರುಪಯೋ ಭ್ರಷ್ಟಾಚಾರವನ್ನು ಎದುರಿಸುತ್ತಿರುವ ರಾಷ್ಟ್ರಗಳ ತನಿಖಾ ಅಧಿಕಾರಿಗಳಿಗೆ ನೆರವಾಗುತ್ತಿದ್ದಾರೆ.   

ವೆಬ್ದುನಿಯಾವನ್ನು ಓದಿ