ಸಾಯುವುದಕ್ಕೆ ಜಗತ್ತಿನಲ್ಲೇ ಅತೀ ಕೆಟ್ಟ ಸ್ಥಳ ಭಾರತ: ಯುಕೆ ವರದಿ

ಬುಧವಾರ, 7 ಅಕ್ಟೋಬರ್ 2015 (14:57 IST)
ಭಾರತವು ಸಾಯುವುದಕ್ಕೆ ಜಗತ್ತಿನಲ್ಲೇ ಅತೀ ಕೆಟ್ಟ ಸ್ಥಳವಾಗಿದೆ ಎಂದು 80 ರಾಷ್ಟ್ರಗಳ ಸಾವಿನ ಗುಣಮಟ್ಟ ಅಧ್ಯಯನದಲ್ಲಿ ಹೇಳಿದೆ.  ಆದರೆ ಕೇರಳವು ಜೀವನದ ಕೊನೆಯಲ್ಲಿ ಉತ್ತಮ ಆರೈಕೆ ನೀಡುವ ಮೂಲಕ ಭಿನ್ನವಾದ ಪ್ರವೃತ್ತಿ ಹೊಂದಿರುವುದಕ್ಕೆ ಶ್ಲಾಘನೆಗೆ ಒಳಪಟ್ಟಿದೆ.
 
ಎಕಾನಾಮಿಕರ್ ಇಂಟೆಲಿಜೆನ್ಸ್ ಯೂನಿಟ್ ವರದಿಯಲ್ಲಿ ಯುಕೆಯು ಸಾಯುವುದಕ್ಕೆ ಅತೀ ಉತ್ತಮ ಸ್ಥಳವೆಂದು ಪತ್ತೆಮಾಡಿದ್ದು, ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರಗಳು 80 ರಾಷ್ಟ್ರಗಳ ಸೂಚ್ಯಂಕದಲ್ಲಿ ಕೆಳಮಟ್ಟದಲ್ಲಿದೆ.ಆದಾಗ್ಯೂ ಕೇರಳಲ್ಲಿ ಗಂಭೀರ ಕಾಯಿಲೆಗಳ ರೋಗಿಗಳ ಉಪಶಾಮಕ ಆರೈಕೆ ಅವಕಾಶವನ್ನು ಶ್ಲಾಘಿಸಿದೆ.
 
ಒಟ್ಟಾರೆ ಸ್ಕೋರ್‌ನಲ್ಲಿ ಭಾರತ ಸೂಚ್ಯಂಕದ ಕೆಳಮಟ್ಟದಲ್ಲಿದ್ದು, ಅನೇಕ ಸೂಚಿಗಳಲ್ಲಿ ಕೆಟ್ಟದಾಗಿ ಕಾರ್ಯನಿರ್ವಹಿಸಿದ್ದರೂ, ಕೇರಳದಲ್ಲಿ ಪ್ರವೃತ್ತಿ ಭಿನ್ನವಾಗಿದೆ. ಭಾರತದ ಜನಸಂಖ್ಯೆಯಲ್ಲಿ ಶೇ. 3ರಷ್ಟು ಜನಸಂಖ್ಯೆಯಿರುವ ಸಣ್ಣ ರಾಜ್ಯ ಕೇರಳು ಭಾರತದ ಮೂರನೇ ಎರಡರಷ್ಟು ಉಪಶಾಮಕ ಆರೈಕೆ ಸೇವೆಗಳನ್ನು ನೀಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. 
 
ಉಪಶಾಮಕ ಚಿಕಿತ್ಸೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ನೀಡಲಾಗುತ್ತಿದ್ದು, ಕೇರಳದಲ್ಲಿ ವೃದ್ಧಾಪ್ಯದ ಆರೈಕೆಯಲ್ಲಿ ಸರ್ಕಾರದ ಬೆಂಬಲ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ಸಮರ್ಥ ಸಂಯೋಜನೆಯನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ. 
 

ವೆಬ್ದುನಿಯಾವನ್ನು ಓದಿ