ಭಾರತದ ರಾಜತಾಂತ್ರಿಕರ ಪುತ್ರಿಗೆ 225,000 ಡಾಲರ್ ಪರಿಹಾರ

ಶನಿವಾರ, 20 ಸೆಪ್ಟಂಬರ್ 2014 (12:44 IST)
ಸೈಬರ್ ಅಪರಾಧದ ಆರೋಪಕ್ಕಾಗಿ ಅಮಾನತು, ಬಂಧನ ಮತ್ತು  ಒಂದು ದಿನದ ಜೈಲು ಶಿಕ್ಷೆಗೆ ಒಳಗಾಗಿದ್ದ ಭಾರತೀಯ ರಾಜತಾಂತ್ರಿಕರ ಪುತ್ರಿಯೊಬ್ಬರು ನಿರ್ದೋಷಿ ಎಂದು ಸಾಬೀತಾಗಿದ್ದು,  ನ್ಯೂಯಾರ್ಕ್ ನಗರದಿಂದ ಪರಿಹಾರರ್ಥವಾಗಿ 225,000 ಡಾಲರ್ ಗೆದ್ದಿದ್ದಾರೆ. 
 
ಪರಿಹಾರ ಒಪ್ಪಂದಕ್ಕೆ  ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಧೀಶ ಜಾನ್ ಕೊಯಿಟಲ್ ಒಪ್ಪಿಗೆ ಸೂಚಿಸಿದ್ದು, ಭಾರತದ ಕಾನ್ಸುಲೇಟ್‌ನಲ್ಲಿ ಮಾಜಿ ಕಾನ್ಸಲ್ ಹುದ್ದೆಯಲ್ಲಿದ್ದ ದೇಬಶಿಶ್ ಬಿಸ್ವಾಸ್ ಪುತ್ರಿ ಕೃತ್ತಿಕಾ ಬಿಶ್ವಾಸ್ ಅವರನ್ನು ಶ್ಲಾಘಿಸಿದ್ದಾರೆ.  ಕೃತ್ತಿಕಾ ಗೌರವ, ಭಾರತದ ರಾಜತಾಂತ್ರಿಕರ ಗೌರವ ಮತ್ತು ಭಾರತದ ಗೌರವ ಇದರಿಂದ ಕುಂದಿದೆ ಎಂದು ವಕೀಲ ರವಿ ಬಾತ್ರಾ ವಾದ ಮಂಡಿಸಿದ್ದರು.

21 ವರ್ಷದ ಬಿಸ್ವಾಸ್ ಅವರು ಶಿಕ್ಷಕರಿಗೆ ಬೆದರಿಕೆಯ ಈ ಮೇಲ್ ಕರೆಗಳನ್ನು ಮಾಡಿದ ಆರೋಪ ಹೊರಿಸಲಾಗಿತ್ತು. ಆದರೆ ಪುರುಷ ಸಹಪಾಠಿಯೊಬ್ಬ ಈ ಈಮೇಲ್ ಕಳಿಸಿದ್ದನೆಂಬುದು ರುಜುವಾತಾದ ಬಳಿಕ ಅವರ ವಿರುದ್ಧ ಆರೋಪಗಳನ್ನು ವಜಾ ಮಾಡಲಾಗಿತ್ತು. ತಮ್ಮನ್ನು ಬಂಧನಕ್ಕೆ ಸಂಬಂಧಿಸಿದ ತನಿಖೆ ಯಾವುದೇ ನಿಜವಾದ ಸಾಕ್ಷ್ಯಾಧಾರದಿಂದ ಕೂಡಿಲ್ಲ ಎಂದು ಆರೋಪಿಸಿದ್ದ ಬಿಸ್ವಾಸ್  ನ್ಯೂಯಾರ್ಕ್ ಸಿಟಿ ವಿರುದ್ಧ ದಾವೆಯಲ್ಲಿ 1.5 ದಶಲಕ್ಷ ಪರಿಹಾರವನ್ನು ಕೋರಿದ್ದರು.

ತನಿಖೆಯ ವೇಳೆಯಲ್ಲಿ ಕೃತ್ತಿಕಾ ನಿರ್ದೋಷಿ ಎಂದು ಸಾಬೀತಾಗಿತ್ತು. ಅಂತರ್ಜಾಲ ಸೇವೆ ಒದಗಿಸಿದವರು ಟೈಮ್ ವಾರ್ನರ್ ರೋಡ್‌ರನ್ನರ್ ಆಗಿದ್ದು, ತಪ್ಪಿತಸ್ಥನ ಐಎಎಸ್‌ಪಿ ಅರ್ತ್‌ಲಿಂಕ್ ಎನ್ನುವುದನ್ನು ಸಾಬೀತು ಮಾಡಿದ್ದಾಗಿ ಕೃತ್ತಿಕಾ ಪರ ವಕೀಲರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ