ಪೊಲೀಸ್ ಅಧಿಕಾರಿಯಿಂದ ಹಲ್ಲೆಗೊಳಗಾದ ಭಾರತೀಯ ವ್ಯಕ್ತಿಗೆ ಪಾರ್ಶ್ವವಾಯು

ಬುಧವಾರ, 2 ಸೆಪ್ಟಂಬರ್ 2015 (19:03 IST)
58 ವರ್ಷದ ನಿಶ್ಯಸ್ತ್ರ ಭಾರತೀಯ ವ್ಯಕ್ತಿಯ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ಮಾಡಿ ಆಂಶಿಕವಾಗಿ ಪಾರ್ಶ್ವವಾಯುವಿಗೆ ಗುರಿ ಮಾಡಿದ ಆರೋಪದ ಮೇಲೆ ಅಮೆರಿಕದ ಪೊಲೀಸ್ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. 
 
ಅಮೆರಿಕದ ಅಲಬಾಬಾ ಸ್ಟೇಟ್ಸ್‌ನಲ್ಲಿ ಸುರೇಶ್ ಬಾಯ್ ಪಟೇಲ್ ಎಂಬ ವ್ಯಕ್ತಿಯ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪವನ್ನು ಮ್ಯಾಡಿಸನ್ ಪೊಲೀಸ್ ಅಧಿಕಾರಿ ಎರಿಕ್ ಪಾರ್ಕರ್ ಮೇಲೆ ವಿಧಿಸಲಾಗಿದೆ.  ಪಟೇಲ್ ವಾಕರ್ ಸಹಾಯದಿಂದ ಕೋರ್ಟ್‌ಗೆ ಆಗಮಿಸಿದ್ದು, ಅಲ್ಲಿ ದ್ವಿಭಾಷಿ ಮೂಲಕ ಸಾಕ್ಷ್ಯ ನುಡಿದರು.
 
 ಪಾರ್ಕರ್ ಅವರನ್ನು ಮ್ಯಾಡಿಸನ್ ಪೊಲೀಸ್ ಇಲಾಖೆ ವಜಾ ಮಾಡಿದ್ದು, ತಪ್ಪಿತಸ್ಥರಾದಗರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. 
ಪಟೇಲ್ ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದಾಗ ಪೊಲೀಸ್ ಅಧಿಕಾರಿ ಅವರ ಮೇಲೆ ಹಿಂಸಾತ್ಮಕವಾಗಿ ಯಾವುದೇ ಪ್ರಚೋದನೆಯಿಲ್ಲದೇ ಹಲ್ಲೆ ಮಾಡಿದ್ದರಿಂದ ಆಂಶಿಕವಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ ಎಂದು ದಾವೆಯಲ್ಲಿ ಆರೋಪಿಸಲಾಗಿದೆ. ಹಿಂದಿನ ದಿನ ಪಟೇಲ್ ತನ್ನ ಪುತ್ರ ಮತ್ತು ಸೊಸೆಯ ಅಕಾಲಿಕವಾಗಿ ಹುಟ್ಟಿದ 17 ತಿಂಗಳ ಮಗುವಿನ ಆರೈಕೆಗೆ ಅಮೆರಿಕಕ್ಕೆ ಆಗಮಿಸಿದ್ದರು.
 
ವಿಡಿಯೊದಲ್ಲಿ ಪಟೇಲ್ ಮೌನವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಪಟೇಲ್ ಅವರನ್ನು ಸಂಪರ್ಕಿಸಿ ಹೆಸರು, ವಿಳಾಸ ಗುರುತು ಚೀಟಿ ಕೇಳಿದರು. ಪಟೇಲ್  ನೋ ಇಂಗ್ಲೀಷ್ ಎಂದು ಹೇಳಿ ತನ್ನ ಪುತ್ರನ ಮನೆಯತ್ತ ಬೆರಳು ತೋರಿಸಿದರು. ಆಗ ಪಾರ್ಕರ್ ಎಂಬ ಹೆಸರಿನ ಪೊಲೀಸ್ ಅಧಿಕಾರಿ ಅನಾಮತ್ತಾಗಿ ಪಟೇಲ್‌ರನ್ನು ನೆಲಕ್ಕೆ ಬೀಳಿಸಿ ಬೆದರಿಕೆ ಹಾಕಿದ್ದರು. ಈ ಸಂದರ್ಭದಲ್ಲಿ ಪಟೇಲ್ ಆಘಾತದಿಂದ ಪಾರ್ಶ್ವವಾಯುವಿಗೆ ತುತ್ತಾದರು. 
 

ವೆಬ್ದುನಿಯಾವನ್ನು ಓದಿ