ಬಾಹ್ಯಾಕಾಶಕ್ಕೆ ತೆರಳಲು ಭಾರತೀಯ ಮೂಲದ ಕೆನಡಾ ವೈದ್ಯೆಗೆ ತರಬೇತಿ

ಸೋಮವಾರ, 12 ಅಕ್ಟೋಬರ್ 2015 (20:54 IST)
ಭಾರತೀಯ ಮೂಲದ ಕೆನಡಾ ವೈದ್ಯೆಯೊಬ್ಬರು  ವಿಜ್ಞಾನಿ-ಗಗನಯಾನಿ ಯೋಜನೆಗೆ ತರಬೇತಿ ಪಡೆಯುತ್ತಿದ್ದು, ಬಾಹ್ಯಾಕಾಶದಲ್ಲಿ ಪ್ರಯೋಗಗಳನ್ನು ಮಾಡಲು ಅವರಿಗೆ ಅವಕಾಶ ನೀಡಲಾಗುತ್ತದೆ. 
 
ಎಡ್ಮಂಟನ್‌ನಲ್ಲಿ ವೈದ್ಯೆಯಾಗಿರುವ ಶಾವ್ನಾ ಪಾಂಡ್ಯಾ ಕೆನಡಾ, ಅಮೆರಿಕ ಮತ್ತು ಸ್ಪೇನ್‌ನ ಇನ್ನೂ ಇಬ್ಬರ ಜತೆ ಪ್ರಾಜೆಕ್ಟ್ ಪೋಸುಮ್‌ನ ವಿಜ್ಞಾನಿ-ಗಗನಯಾನಿ ಕೋರ್ಸ್ ತರಬೇತಿಯನ್ನು  ಅಮೆರಿಕದ ಎಂಬ್ರಿ ರಿಡಲ್ ವೈಮಾನಿಕ ವಿವಿಯಲ್ಲಿ ಪಡೆಯುತ್ತಿದ್ದಾರೆ. 
 
ವೈದ್ಯೆ ಬಾಹ್ಯಕಾಶ ಉಡುಪುಗಳನ್ನು ಧರಿಸುವ, ಏರೋಬ್ಯಾಟಿಕ್  ಫ್ಲೈಟ್‌ಗಳಲ್ಲಿ ಹಾರುವ ಮತ್ತು ಬದಲಾಗುವ ಗುರುತ್ವ ವಾತಾವರಣದ ಅನುಭವವನ್ನು ತರಬೇತಿಯಲ್ಲಿ ಪಡೆಯುತ್ತಾರೆ.  ನಾನು ಬಾಲಕಿಯಾಗಿದ್ದಾಗಿನಿಂದ ಬಾಹ್ಯಾಕಾಶ, ನಕ್ಷತ್ರಗಳನ್ನು ಇಷ್ಟಪಡುತ್ತಿದ್ದೆ. ಇದು ಜೀವಮಾನದ ಕನಸು ನನಸಾಗುವ ರೀತಿಯಲ್ಲಿದೆ ಎಂದು ಪಾಂಡ್ಯಾ ತಿಳಿಸಿದ್ದಾರೆ.
 
ರಾತ್ರಿ ಮೋಡಗಳ ಸುತ್ತಮುತ್ತಲಿನ ಸ್ಥಿತಿಗತಿಗಳ ಬಗ್ಗೆ ವೈದ್ಯ-ಗಗನಯಾನಿಗಳಿಗೆ  ಪರಿಚಯಿಸುವ ಗುರಿಯನ್ನು ತರಬೇತಿ ಹೊಂದಿದ್ದು, ಮೇಲಿನ ಮೆಸೋಸ್ಪಿಯರ್‌ನಲ್ಲಿ ಹವಾಮಾನ ಬದಲಾವಣೆಯಿಂದ ಇದು ಹೆಚ್ಚಾಗಿರುತ್ತದೆಂದು ಭಾವಿಸಲಾಗಿದೆ. 

ವೆಬ್ದುನಿಯಾವನ್ನು ಓದಿ