ಭಾರತೀಯ ವಿಜ್ಞಾನಿಗೆ ಫ್ರೆಂಚ್ ವಿಶ್ವವಿದ್ಯಾಲಯದ ಗೌರವಾತಿಥ್ಯ....

ಮಂಗಳವಾರ, 23 ಸೆಪ್ಟಂಬರ್ 2014 (10:36 IST)
ಭಾರತೀಯ ಮೂಲದ ಬ್ರಿಟನ್ ವಿಜ್ಞಾನಿ ಕರ್ತರ್ ಲಲ್ವಾನಿ ಅವರು ಪ್ರತಿಷ್ಠಿತ ಫ್ರೆಂಚ್ ವಿಶ್ವವಿದ್ಯಾಲಯದ ಗೌರವಾತಿಥ್ಯಕ್ಕೆ ಭಾಜನರಾಗಿದ್ದಾರೆ. ಚರ್ಮ ಶಾಸ್ತ್ರದಲ್ಲಿ ಗಮನಾರ್ಹವಾದ ಫಲಿತಾಂಶವನ್ನು ಹೊಂದಿರುವ ಸೌಂದರ್ಯವರ್ಧಕ ಗುಳಿಗೆಯನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಅವರಿಗೆ ಈ ಗೌರವ ದೊರಕಿದೆ.
 
ಕತಾರ್ ಲಲ್ವಾನಿ, ಬ್ರಿಟನ್ ಬೃಹತ್ ಪೌಷ್ಠಿಕಾಂಶ ಉತ್ಪಾದಕ ವಿಟೋಬಯೋಟಿಕ್ಸ್ (Vitabiotics) ಸಂಸ್ಥಾಪಕ ಮುಖ್ಯಸ್ಥರಾಗಿದ್ದಾರೆ. ಇವರು ಫ್ರೆಂಚ್ ವಿಶ್ವವಿದ್ಯಾಲಯದ ನೇತೃತ್ವದ ಬೆಸಾನಕೊನ್‌ನ್ನಲ್ಲಿರುವ 900 ವರ್ಷಗಳಷ್ಟು ಹಳೆಯದಾದ ಸಂಸ್ಥೆಯೊಂದರ ಭಾಗವಾಗಿ, ಪ್ರತಿಷ್ಠಿತ ಫ್ರೆಂಚ್ ವಿಶ್ವ ವಿದ್ಯಾಲಯ ಮತ್ತು ಚರ್ಮಶಾಶ್ತ್ರ ಸಂಶೋಧನ ಕೇಂದ್ರದಿಂದ ಗೌರವ ಪ್ರಾಧ್ಯಾಪಕತ್ವಕ್ಕೆ ಭಾಜನರಾಗಿದ್ದಾರೆ.
 
ಈ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಗೌರವ ಪ್ರಾಧ್ಯಾಪಕತ್ವದ ಅವಕಾಶವನ್ನು ಬ್ರಿಟಿಷ್ ವಿಜ್ಞಾನಿಗೆ ನೀಡಲಾಗಿದೆ. ಅಲ್ಲದೆ, ಚರ್ಮಶಾಸ್ತ್ರ ವಿಭಾಗದ ವಿಜ್ಞಾನಿಗೆ ಇದೇ ಮೊದಲ ಬಾರಿಗೆ ಈ ಅವಕಾಶವನ್ನು ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ