ರೇಪ್ ಆರೋಪದಿಂದ ದೋಷಮುಕ್ತನಾದ ಕೇಂಬ್ರಿಜ್ ವಿವಿ ಭಾರತೀಯ ವಿದ್ಯಾರ್ಥಿ

ಗುರುವಾರ, 25 ಫೆಬ್ರವರಿ 2016 (19:51 IST)
ಪ್ರತಿಷ್ಠಿತ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ 21 ವರ್ಷದ ಭಾರತೀಯ ವಿದ್ಯಾರ್ಥಿ  ನೈಟ್ ಔಟ್ ಬಳಿಕ ಸಹ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾನೆಂಬ ಆರೋಪದಿಂದ ಮುಕ್ತಗೊಳಿಸಲಾಗಿದೆ.

2013ರಲ್ಲಿ ಬೆಂಗಳೂರಿನಿಂದ ಪ್ರತಿಷ್ಠಿತ ಕ್ವೀನ್ಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಲು ಆಗಮಿಸಿದ್ದ ಪ್ರಥ್ವಿ ಸರ್ದಾರ್  ವಿರುದ್ಧ 2014ರಲ್ಲಿ ಆರೋಪ ಕೇಳಿಬಂದ ಫಲವಾಗಿ ಒಂದು ವರ್ಷ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಸುಳ್ಳು ಆರೋಪಗಳಿಂದ ಅವರನ್ನು ದೋಷಮುಕ್ತಗೊಳಿಸಿದ್ದರಿಂದ ಪೃಥ್ವಿಸರ್ದಾರ್ ಮತ್ತು ಕುಟುಂಬ ಕೃತಜ್ಞರಾಗಿರುವುದಾಗಿ ಪ್ರಥ್ವಿ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. 
 
ಪ್ರಥ್ವಿಯ ವಿರುದ್ಧ ಆರೋಪ ಮಾಡಿದ್ದ ಸಹಪಾಠಿ ಯುವತಿ ನೈಟ್ ಔಟ್ ಬಳಿಕ ರಾತ್ರಿ ಕೋಣೆಗೆ ಹಿಂದಿರುಗುವಾಗ ಪ್ರಥ್ವಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ತಿಳಿಸಿದ್ದಳು. ಆದರೆ ತಾನು ಯುವತಿಯನ್ನು ಬಲಾತ್ಕಾರ ಮಾಡಿಲ್ಲವೆಂಬ ಪ್ರಥ್ವಿ ಹೇಳಿಕೆ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಅವನನ್ನು ದೋಷಮುಕ್ತಗೊಳಿಸಿದ್ದರು.
ಈ ಆರೋಪದಿಂದ ಅವನ ಜೀವನ ಹಾಳಾಗುತ್ತಿತ್ತು. ಈ ತೀರ್ಪಿನಿಂದ ನಾವು ನಿಟ್ಟುಸಿರುಬಿಟ್ಟಿದ್ದೇವೆ. ಪ್ರಥ್ವಿ  ಕಾಲೇಜಿನಲ್ಲಿ ಡಿಗ್ರಿ ಪೂರ್ಣಗೊಳಿಸುವುದನ್ನು ನಾವು ಎದುರುನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
 
 

ವೆಬ್ದುನಿಯಾವನ್ನು ಓದಿ