ಭಾರತೀಯ ವಿದ್ಯಾರ್ಥಿ ಮೇಲೆ ಅಮೆರಿಕದಲ್ಲಿ ಗುಂಡಿನ ದಾಳಿ

ಗುರುವಾರ, 8 ಜೂನ್ 2017 (11:54 IST)
ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂಎಸ್ ಓದುತ್ತಿದ್ದ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ ನಡೆದಿದೆ.
 

ದಾಳಿಗೊಳಗಾದ ವ್ಯಕ್ತಿಯನ್ನ ತೆಲಂಗಾಣ ಮೂಲದ 26 ವರ್ಷದ ಮುಬಿನ್ ಅಹಮ್ಮದ್ ಎಂದು ಗುರ್ತಿಸಲಾಗಿದೆ. ಜೂನ್ 4 ರಂದು ಟೈಮ್ ಕೆಲಸಕ್ಕೆ ತೆರಳಿದ್ದ ಅಂಗಡಿಯಲ್ಲೇ ಗುಂಡಿಕ್ಕಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮುಹಮದ್`ನನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರನೆ ದಿನ ತೆಲಂಗಾಣದಲ್ಲಿರುವ ಪೋಷಕರಿಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ  ತಿಳಿಸಿದ್ದಾರೆ..

2015ರಲ್ಲಿ ಮುಬಿನ್ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ತೆಲಂಗಾಣದಲ್ಲಿರುವ ಪೋಷಕರು ಸ್ಥಳೀಯರ ನೆರವಿನೊಂದಿಗೆ ಮಗನ ಬಳಿಗೆ ತೆರಳಲು ವೀಸಾಗಾಗಿ ಕೇಂದ್ರ ಸ್ವರಾಜ್`ಗೆ ಪತ್ರ ಬರೆದಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ