ಭಾರತೀಯ ಮಹಿಳೆಗೆ ‘ಪತಿ’ ಮನೆಯಿಂದ ಮುಕ್ತಿ ನೀಡಿದ ಪಾಕ್ ನ್ಯಾಯಾಲಯ

ಬುಧವಾರ, 24 ಮೇ 2017 (12:30 IST)
ನವದೆಹಲಿ: ಬಲವಂತವಾಗಿ ಮದುವೆಯಾದ ಪಾಕಿಸ್ತಾನದ ಪತಿಯಿಂದ ದೂರವಾಗಿ ತವರಿಗೆ ಮರಳಲು ಭಾರತೀಯ ಮಹಿಳೆಗೆ ಪಾಕ್ ನ್ಯಾಯಾಲಯ ಒಪ್ಪಿಗೆ ನೀಡಿದೆ.


ದೆಹಲಿ ಮೂಲದ ವೈದ್ಯೆ ಉಸ್ಮಾ ತನ್ನನ್ನು ಪಾಕ್ ಪ್ರಜೆ ತಾಹಿರ್ ಅಲಿ ಬಲವಂತವಾಗಿ ಬೆದರಿಸಿ ಮದುವೆಯಾಗಿ ಪಾಕಿಸ್ತಾನಕ್ಕೆ ಕರೆದುಕೊಂಡು ಬಂದಿದ್ದಾನೆ. ತನಗೆ ತವರಿಗೆ ಮರಳು ಅವಕಾಶ ನೀಡಬೇಕೆಂದು ಅಲ್ಲಿನ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಉಸ್ಮಾ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಗೆ ತವರಿಗೆ ಮರಳಲು ಅವಕಾಶ ನೀಡಿದೆ. ಅಲ್ಲದೆ ಆಕೆಯನ್ನು ಒಮ್ಮೊಮ್ಮೆಯಾದರೂ ಭೇಟಿಯಾಗಲು ಅವಕಾಶ ನೀಡಬೇಕೆಂಬ ಪತಿಯ ಮನವಿಯನ್ನು ತಿರಸ್ಕರಿಸಿದೆ. ತಮ್ಮ ವೀಸಾ ಮತ್ತಿತರ ದಾಖಲೆಗಳನ್ನು ತಾಹಿರ್ ಬಚ್ಚಿಟ್ಟಿದ್ದಾನೆಂದು ಉಸ್ಮಾ ಆರೋಪಿಸಿದ್ದಾಳೆ. ಹೀಗಾಗಿ ಆಕೆಯನ್ನು ಸಕಲ ಭದ್ರತೆಯೊಂದಿಗೆ ವಾಘಾ ಗಡಿ ಮೂಲಕ ಭಾರತಕ್ಕೆ ಕಳುಹಿಸಿಕೊಡಬಹುದು ಎಂದು ನ್ಯಾಯಾಲಯ ಆದೇಶಿಸಿರುವುದಾಗಿ ಪಾಕ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ