ಭಾರತ ಮೂಲದ ಯುವತಿಯ ತಲೆಗೆ ಗನ್ನಿಟ್ಟು ಪಾಕಿಸ್ತಾನದ ಯುವಕನ ಜೊತೆ ಮದುವೆ..!

ಸೋಮವಾರ, 8 ಮೇ 2017 (20:16 IST)
ಗನ್ ಪಾಯಿಂಟ್`ನಲ್ಲಿ ಭಾರತ ಮೂಲದ ಮಹಿಳೆಗೆ ಬಲವಂತವಾಗಿ ಪಾಕಿಸ್ತಾನದ ಪುರುಷನ ಜೊತೆ ಮದುವೆ ಮಾಡಿಸಿರುವ ಘಟನೆ ಇಸ್ಲಾಮಾಬಾದ್`ನಲ್ಲಿ ನಡೆದಿದ್ದು, ನೊಂದ ಮಹಿಳೆ ಉಜ್ಮಾ ವಾಪಸ್ ಭಾರತಕ್ಕೆ ಕಳುಹಿಸುವಂತೆ ಇಂಡಿಯನ್ ಹೈಕಮೀಷನರ್`ಗೆ ದುರು ನೀಡಿದ್ದಾರೆ.

ಇಸ್ಲಾಮಾಬಾದ್ ಕೋರ್ಟ್`ನಲ್ಲಿ ಕೇಸ್ ದಾಖಲಿಸಿರುವ ಉಜ್ಮಾ,  ಪತಿ ತಹೀರ್ ಅಲಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪ ಮಾಡಿದ್ದಾರೆ. ನನ್ನ ವಲಸೆ ದಾಖಲೆಗಳನ್ನ ಕಸಿದುಕೊಂಡು ಗನ್ ಪಾಯಿಂಟ್`ನಲ್ಲಿ ನನಗೆ ಬಲವಂತದ ಮದುವೆ ಮಾಡಿಸಲಾಗಿದೆ ಎಂದು ದೂರಿನಲ್ಲಿ ಉಜ್ಮಾ ಆರೋಪಿಸಿದ್ದಾರೆ ಎಂದು ಪಿಟಿಐ, ಜಿಯೋ ನ್ಯೂಸ್ ವರದಿ ಉಲ್ಲೇಖಿಸಿ ಸುದ್ದಿ ಪ್ರಸಾರ ಮಾಡಿದೆ.

ಭಾರತಕ್ಕೆ ಸುರಕ್ಷಿತವಾಗಿ ತೆರಳುವ ವ್ಯವಸ್ಥೆಯಾಗುವವರೆಗೂ ಇಂಡಿಯನ್ ಹೈಕಮೀಷನರ್ ಅಂಗಳ ಬಿಟ್ಟು ಹೋಗುವುದಿಲ್ಲ ಎಂದು ಉಜ್ಮಾ ಪಟ್ಟು ಹಿಡಿದಿದ್ದಾರೆ.

ಉಜ್ಮಾ ವಿದೇಶಿ ಭೇಟಿ ಕೆಟಗರಿಯಲ್ಲಿ ಮಾತ್ರ ವೀಸಾ ಪಡೆದಿದ್ದಾರೆ. ಪಾಕ್ ಯುವಕನ ಜೊತೆ ವಿವಾಹವಾಗುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ದೆಹಲಿಯ ಪಾಕಿಸ್ತಾನಿ ಹೈಕಮೀಷನರ್ ಕಚೇರಿ ಸ್ಪಷ್ಟಪಡಿಸಿದೆ. ಹೀಗಾಗಿ, ಉಜ್ಮಾ  ವಾದಕ್ಕೆ ಮತ್ತಷ್ಟು ಬಲ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ