ಪಾಕ್ ಅಣ್ವಸ್ತ್ರ ತಯಾರಿಕೆ ನೆಲೆಗಳ ಮೇಲೆ ದಾಳಿಗೆ ಇಂದಿರಾ ಯೋಜಿಸಿದ್ದರು: ಸಿಐಎ

ಸೋಮವಾರ, 31 ಆಗಸ್ಟ್ 2015 (21:32 IST)
1980ರಲ್ಲಿ ಅಧಿಕಾರದ ಗದ್ದುಗೆಗೆ ಏರಿದ್ದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾಕಿಸ್ತಾನದ ಅಣ್ವಸ್ತ್ರ ಅಭಿವೃದ್ಧಿ ನೆಲೆಗಳ  ಮೇಲೆ ಮಿಲಿಟರಿ ದಾಳಿ ಮಾಡುವ ಬಗ್ಗೆ ಪರಿಗಣಿಸಿದ್ದರು. ಪಾಕಿಸ್ತಾನ ಅಣ್ವಸ್ತ್ರಗಳ ಸಾಮರ್ಥ್ಯ ಗಳಿಸುವುದನ್ನು ತಪ್ಪಿಸುವುದು ಅವರ ಉದ್ದೇಶವಾಗಿತ್ತು ಎಂದು ಸಿಐಎ ದಾಖಲೆಯೊಂದರಲ್ಲಿ ತಿಳಿಸಲಾಗಿದೆ. 
 
 ಅಮೆರಿಕವು ಎಫ್‌-16 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಒದಗಿಸುವ ಮುಂದುವರಿದ ಹಂತದಲ್ಲಿದ್ದಾಗ, ಇಂದಿರಾ ಗಾಂಧಿ ಈ ನಿರ್ಧಾರಕ್ಕೆ ಬಂದಿದ್ದರು ಎಂದು  ಸಿಐಎ ಸಿದ್ಧಪಡಿಸಿರುವ ''ಪಾಕಿಸ್ತಾನದಲ್ಲಿ ಅಣ್ವಸ್ತ್ರ ಬೆಳವಣಿಗೆಗೆ ಭಾರತದ ಪ್ರತಿಕ್ರಿಯೆ'' ಎಂಬ ಹೆಸರಿನ ದಾಖಲೆಯಲ್ಲಿ ಇದನ್ನು ತಿಳಿಸಲಾಗಿದೆ. 
 
ಈ ವರ್ಷದ ಜೂನ್‌ನಲ್ಲಿ ಸಿಐಎ ವೆಬ್‌ಸೈಟ್‌ನಲ್ಲಿ 12 ಪುಟಗಳ ದಾಖಲೆಯನ್ನು ಪ್ರಕಟಿಸಲಾಗಿದೆ.  ಇಂದಿರಾಗಾಂಧಿ  ಪಾಕಿಸ್ತಾನ ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಸಾಧಿಸಿದ ಪ್ರಗತಿ ಬಗ್ಗೆ ಆತಂಕಿತರಾಗಿದ್ದರು. ಇಸ್ಲಾಮಾಬಾದ್ ಅಣ್ವಸ್ತ್ರ ಹೊಂದುವಲ್ಲಿ ಕೆಲವೇ ಹೆಜ್ಜೆಗಳು ದೂರದಲ್ಲಿದೆ  ಎಂದು ಅವರು ನಂಬಿದ್ದರು. ಅಮೆರಿಕ ಕೂಡ ಅದೇ ಅಂದಾಜು ಮಾಡಿತ್ತು. 
 

ವೆಬ್ದುನಿಯಾವನ್ನು ಓದಿ