ಇಂಡೊನೇಶಿಯಾ ಮಿಲಿಟರಿ ವಿಮಾನ ಅಪಘಾತ: 30 ಜನರ ಸಾವು

ಮಂಗಳವಾರ, 30 ಜೂನ್ 2015 (15:57 IST)
ಇಂಡೋನೇಶಿಯಾದ ಮಿಲಿಟರಿ ವಿಮಾನವೊಂದು ಮಂಗಳವಾರ ಮೇಡಾನ್ ಉತ್ತರ ಸುಮಾತ್ರ ನಗರದ ವಸತಿ ಪ್ರದೇಶ ಮತ್ತು ಹೊಟೆಲೊಂದಕ್ಕೆ ಅಪ್ಪಳಿಸಿದ್ದರಿಂದ ಕನಿಷ್ಟ 30 ಜನರು ಸತ್ತಿದ್ದಾರೆ.
 
ಸಿ-130 ಹರ್ಕ್ಯೂಲಸ್ ವಿಮಾನದಲ್ಲಿ ಪೈಲಟ್ ಸೇರಿದಂತೆ 12 ಸಿಬ್ಬಂದಿ ಇದ್ದರು. ಅವರಲ್ಲಿ ಐವರ ದೇಹ ಪತ್ತೆಯಾಗಿದೆ.  ಸ್ಥಳೀಯ ಟೆಲಿವಿಷನ್‌ನಲ್ಲಿ ನೆರೆಹೊರೆಯ ಮನೆಗಳು ಮತ್ತು ಹೊಟೆಲ್‌ಗಳು ಬೆಂಕಿಯ ಜ್ವಾಲೆಯಲ್ಲಿ ಉರಿಯುತ್ತಾ ಆ ಪ್ರದೇಶದಲ್ಲಿ ಕಪ್ಪು ಹೊಗೆ ಆವರಿಸಿರುವುದನ್ನು ತೋರಿಸಿದೆ. 
 
ಏವಿಯೇಷನ್ ಸುರಕ್ಷತೆ ಜಾಲದ ಪ್ರಕಾರ, ಕಳೆದ ದಶಕದಲ್ಲಿ ಇಂಡೋನೇಶಿಯಾ ಮಿಲಿಟರಿ ಅಥವಾ ಪೊಲೀಸ್ ವಾಹನವನ್ನು ಒಳಗೊಂಡ 10 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಿಂದ ಇಂಡೋನೇಶಿಯಾ ವಿಮಾನಗಳ ಸುರಕ್ಷತೆ ದಾಖಲೆ ಮತ್ತು ಅದರ ಹಳೆಯ ವಾಣಿಜ್ಯ ಮತ್ತು ಮಿಲಿಟರಿ ವಿಮಾನಗಳ ಬಗ್ಗೆ ಬೆಳಕು ಚೆಲ್ಲುತ್ತವೆ.
 
ಡಿ.28ರಂದು ಇಂಡೋನೇಶಿಯಾದಿಂದ ಸಿಂಗಪುರಕ್ಕೆ ಹೊರಟ ಏರ್ ಏಷ್ಯಾ ವಿಮಾನ ಮಧ್ಯದಲ್ಲೇ ಅಪಘಾತಕ್ಕೀಡಾಗಿ 162 ಪ್ರಯಾಣಿಕರು ಸತ್ತಿದ್ದರು.
ಹರ್ಕ್ಯುಲಸ್ ಸಾರಿಗೆ ವಿಮಾನವು ಮೇಡನ್ ವಿಮಾನಯಾನ ನೆಲೆಯಿಂದ ನ್ಯಾಚುನಾ ದ್ವೀಪಗಳಿಗೆ ಸಾಗುವಾಗ ಟೇಕ್ ಆಫ್‌ಗೆ ಕೆಲವೇ ನಿಮಿಷಗಳ ಮುನ್ನ ಅಪಘಾತಕ್ಕೀಡಾಗಿದೆ. ತಾಂತ್ರಿಕ ತೊಂದರೆಗಳಿದ್ದುದರಿಂದ ಪೈಲಟ್‌ಗೆ ವಾಪಸ್ ಬರಲು ತಿಳಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ