ಒಬಾಮಾ ಪತ್ನಿಗೆ ಸೌದಿ ರಾಜ ಮನೆತನದವರಿಂದ ಅಪಮಾನ

ಬುಧವಾರ, 28 ಜನವರಿ 2015 (14:55 IST)
ಸೌದಿ ಅರೇಬಿಯಾದ ಮೃತ ರಾಜನ ಶ್ರದ್ಧಾಂಜಲಿಗೆಂದು ಇಲ್ಲಿಗೆ ತೆರಳಿದ್ದ ಅಮೆರಿಕಾ ಅಧ್ಯಕ್ಷ ಹಾಗೂ ಅವರ ಪತ್ನಿ ಮಿಶೆಲ್ ಅವರನ್ನು ಕಾರ್ಯಕ್ರಮಕ್ಕೂ ಮುನ್ನ ಸ್ವಾಗತಿಸುತ್ತಿದ್ದಾಗ ಅಧ್ಯಕ್ಷರಿಗೆ ಹಸ್ತಾಲಾಘವ ನೀಡಿ ಪತ್ನಿಗೆ ನೀಡಲು ನಿರಾಕರಿಸಿರುವ ಘಟನೆ ದುಬೈನಲ್ಲಿ ನಡೆದಿದ್ದು, ಅಮೆರಿಕಾ ರಾಷ್ಟ್ರದ ಪ್ರಥಮ ಪ್ರಜೆ ಒಬಾಮ ಅವರ ಪತ್ನಿ ಮಿಶೆಲ್‌ಗೆ ಅಪಮಾನ ಎಸಗಲಾಗಿದೆ. 
 
ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಅವರು ಕಳೆದ ಶುಕ್ರವಾರ ಮುಂಜಾನೆ ಮೃತರಾಗಿದ್ದರು. ಈ ಹಿನ್ನೆಲೆಯಲ್ಲಿ ಶ್ರದ್ದಾಂಜಲಿ ಹಾಗೂ ಅಭಿನಂದನೆ ಸಲ್ಲಿಸಲು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಪತ್ನಿಯೊಂದಿಗೆ ತೆರಳಿದ್ದರು. ಈ ಸಂಧರ್ಭದಲ್ಲಿ ಈ ಅಪಮಾನ ಎಸಗಲಾಗಿದೆ. 
 
ಇನ್ನು ಈ ಘಟನೆಗೆ ಅಲ್ಲಿ ಅಳವಡಿಸಿಕೊಂಡಿರುವ ಮಹಿಳಾ ಸಂಪ್ರದಾಯವೇ ಕಾರಣ ಎನ್ನಲಾಗಿದ್ದು, ಅಲ್ಲಿನ ಮಹಿಳೆಯರೆಲ್ಲರೂ ಕೂಡ ಬುರ್ಕಾವನ್ನು ಧರಿಸುತ್ತಾರೆ. ಆದರೆ ಒಬಾಮ ಪತ್ನಿ ಮಿಶೆಲ್ ಯಾವುದೇ ಬುರ್ಕಾ ಧರಿಸಿರಲಿಲ್ಲ. ಹಾಗಾಗಿಯೇ ಮಿಶೆಲ್ ಅವರಿಗೆ ಅಲ್ಲಿನ ರಾಜ ಕುಟುಂಬದವರು ಹಸ್ತಾಲಾಘವ ನೀಡದೆ ಅಪಮಾನ ಎಸಗಲಾಗಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ