ಭಾರತವಾಯ್ತು, ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಇರಾನ್ ಸೇನಾಪಡೆ

ಶುಕ್ರವಾರ, 30 ಸೆಪ್ಟಂಬರ್ 2016 (14:22 IST)
ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಸೀಮಿತ ದಾಳಿ ನಡೆಸಿ 45 ಉಗ್ರರನ್ನು ಹತ್ಯೆ ಮಾಡಿರುವ ಬೆನ್ನಲ್ಲೆ ಇರಾನ್ ಸೇನಾಪಡೆ ಕೂಡಾ ಪಾಕಿಸ್ತಾನದ ಮೇಲೆ ದಾಳಿ ನಡೆಸಿರುವುದು ವರದಿಯಾಗಿದೆ.  
ಇರಾನ್ ಮಾಧ್ಯಮಗಳ ಪ್ರಕಾರ, ಇರಾನ್ ಸೇನಾಪಡೆಯ ಯೋಧರು ಪಾಕಿಸ್ತಾನದ ಪಂಜ್‌ಗುರ್ ನಗರದ ಮೇಲೆ ಮೊರ್ಟಾರ್ ಶೆಲ್‌ಗಳಿಂದ ದಾಳಿ ಮಾಡಿದೆ. ಆದರೆ, ಘಟನೆಯಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
 
ಭಾರತೀಯ ಸೇನಾಪಡೆಗಳ ದಾಳಿಯಿಂದ ಕಂಗಾಲಾಗಿರುವ ಪಾಕ್ ಜನತೆ, ಇದೀಗ ಇರಾನ್ ಕೂಡಾ ಮೊರ್ಟಾರ್ ಶೆಲ್‌ಗಳ ದಾಳಿ ನಡೆಸಿರುವುದು ತೀವ್ರ ಆತಂಕಕ್ಕೊಳಗಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಭಾರತದ ಸೇನಾ ದಾಳಿಯಿಂದ ಆತಂಕದಲ್ಲಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಸರಕಾರ, ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆಗಾಗಿ ದೌಡಾಯಿಸಿದೆ ಎಂದು ಮೂಲಗಳು ತಿಳಿಸಿವೆ.
 
ಪಾಕಿಸ್ತಾನ ಇರಾನ್‌ದೇಶದೊಂದಿಗೆ 800 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಗಡಿಯಲ್ಲಿರುವ ಉಗ್ರರನ್ನು ಸದೆಬಡೆಯಲು ಉಭಯ ದೇಶಗಳು 2014ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು.
 
ಏತನ್ಮಧ್ಯೆ, ಇರಾನ್ ಹಲವಾರು ಬಾರಿ ಪಾಕಿಸ್ತಾನದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ ಉದಾಹರಣೆಗಳಿವೆ.
 
ಕಳೆದ ವರ್ಷ, ಇರಾನ್ ದೇಶದ ಸೇನಾಪಡೆಗಳು ಪಾಕಿಸ್ತಾನದ ವಾಶುಕ್ ಜಿಲ್ಲೆಯಲ್ಲಿ ಮೂರು ಮೊರ್ಟಾರ್‌ ಶೆಲ್‌ಗಳ ದಾಳಿ ನಡೆಸಿ ಉದ್ರಿಕ್ತ ವಾತಾವರಣಕ್ಕೆ ಕಾರಣವಾಗಿತ್ತು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ