ಇರಾಕಿ ಫೈಟರ್ ಜೆಟ್‌ನಿಂದ ಆಕಸ್ಮಿಕ ಬಾಂಬ್ ದಾಳಿ: 12 ಜನರ ಸಾವು

ಸೋಮವಾರ, 6 ಜುಲೈ 2015 (19:57 IST)
ಇರಾಕಿನ ರಷ್ಯಾ ನಿರ್ಮಿತ ಫೈಟರ್ ಜೆಟ್ ಆಕಸ್ಮಿಕವಾಗಿ ನೆರೆಯ ಬಾಗ್ದಾದ್ ಮೇಲೆ ಸೋಮವಾರ ಬಾಂಬ್ ಸುರಿಸಿದ್ದರಿಂದ 12 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಗ್ರೂಪ್‌ ವಿರುದ್ಧ ಹೋರಾಟ ಮಾಡಲು ಬಳಸಿದ್ದ ಅನೇಕ ಸುಖೋಯ್ ವಿಮಾನಗಳ ಪೈಕಿ ಇದು ಒಂದಾಗಿದ್ದು, ನೆಲೆಗೆ ಹಿಂತಿರುಗುತ್ತಿದ್ದಾಗ ಆಕಸ್ಮಿಕ ಸಂಭವಿಸಿದೆ. 
 
ಮಿಲಿಟರಿ ವಕ್ತಾರ ಬ್ರಿಗ್. ಜನರಲ್ ಸಾದ್ ಮಾನ್ ಇಬ್ರಾಹಿಂ, ತಾಂತ್ರಿಕ ವೈಫಲ್ಯದಿಂದ ಸುಖೋಯ್ ಜೆಟ್ ಅಸಮರ್ಪಕವಾಗಿ ನಿರ್ವಹಿಸಿ ಬಾಂಬ್ ಬೀಳಿಸಿದೆ. ಇದರಿಂದ ಬಾಗ್ದಾದ್ ಅನೇಕ ಮನೆಗಳ ಮೇಲೆ ಬಾಂಬ್‌ನಿಂದ ಹಾನಿಯಾಗಿವೆ. 
 
ಮೃತಪಟ್ಟ 12 ಜನರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳಿದ್ದಾರೆ. ಇನ್ನೂ 25 ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಇರಾಕ್‌ನಲ್ಲಿ ಅಮೆರಿಕ ಪಡೆಗಳು 2011ರಲ್ಲಿ ವಾಪಸಾದಾಗಿನಿಂದ ಕೆಟ್ಟ ಬಿಕ್ಕಟ್ಟು ಹಾದುಹೋಗಿದ್ದು, ಇಸ್ಲಾಮಿಕ್ ಸ್ಟೇಟ್ ಗ್ರೂಪ್ ದೇಶದ ಉತ್ತರದಲ್ಲಿ ಬಹುಭಾಗ ವಶಕ್ಕೆ ತೆಗೆದುಕೊಂಡಿದೆ. ಕಳೆದ ವರ್ಷ ಸುನ್ನಿ ಉಗ್ರರು ಇರಾಕ್ ಎರಡನೇ ದೊಡ್ಡ ನಗರ ಮೊಸುಲ್ ಮತ್ತು ಅನ್ಬಾರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿತ್ತು. 

ವೆಬ್ದುನಿಯಾವನ್ನು ಓದಿ